ಪ್ರಧಾನಿ ನರೇಂದ್ರ ಮೋದಿ ಉಗ್ರರ ಸದೆಬಡಿರುವುದನ್ನು ಪ್ರತಿಯೊಬ್ಬ ಭಾರತೀಯ ಕೊಂಡಾಡುತ್ತಿದ್ದಾನೆ: ನಿಖಿಲ್ ಕುಮಾರಸ್ವಾಮಿ

Updated on: May 08, 2025 | 4:51 PM

ಸಚಿವ ಜಮೀರ್ ಅಹ್ಮದ್ ತನ್ನನ್ನು ಯುದ್ಧಕ್ಕೆ ಕಳಿಸಲಿ, ಬಾಂಬುಗಳನ್ನು ಕಟ್ಟಿಕೊಂಡು ಹೋಗುತ್ತೇನೆ ಎಂದು ಹೇಳಿರುವುನ್ನು ನಿಖಿಲ್ ಕುಮಾರಸ್ವಾಮಿ ತಮಾಷೆ ಮಾಡಿ ನಕ್ಕರು. ಬಾಂಬ್ ಕಟ್ಟಿಕೊಳ್ಳುವ ಮನಸ್ಥಿತಿ ಅವರಿಗೆ ಹೇಗೆ ಬಂತು? ಅ ಸಮುದಾಯ ಮಾತೆತ್ತಿದರೆ ಬಾಂಬ್ ಅನ್ನುತ್ತೆ ಎಂದು ಅವರು ಹೇಳಿದರು. ಸಿದ್ದರಾಮಯ್ಯ ಹಣೆಗೆ ತಿಲಕವಿಟ್ಟಿದ್ದನ್ನೂ ನಿಖಿಲ್ ಗೇಲಿ ಮಾಡಿದರು.

ರಾಮನಗರ, ಮೇ 8: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ನಿನ್ನೆ ಪಾಕಿಸ್ತಾನದಲ್ಲಿರುವ ಉಗ್ರರತಾಣಗಳ ಮೇಲೆ ಸೇನೆಯ ಮೂಲಕ ದಾಳಿ ನಡೆಸಿದ್ದನ್ನು ಕೊಂಡಾಡಿದ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ನವರು ಪಠಿಸಿದ ಶಾಂತಿಮಂತ್ರವನ್ನು ಲೇವಡಿ ಮಾಡಿದರು. ಉಗ್ರರು ಅಮಾಯಕ ಪ್ರವಾಸಿಗರ ಮೇಲೆ ದಾಳಿ ನಡೆಸಿ ಪುರುಷರನ್ನು ಕೊಂದು ಮಹಿಳೆಯರ ಸಿಂಧೂರವನ್ನು ಅಳಿಸಿಹಾಕಿದ್ದರು. ಭಾರತೀಯ ಸೇನೆಯು ಸಿಂಧೂರ ಹೆಸರಲ್ಲೇ ಕಾರ್ಯಾಚರಣೆ ನಡೆಸಿ ಅನೇಕ ಭಯೋತ್ಪಾದಕರನ್ನು ಮಣ್ಣುಗೂಡಿಸಿದ್ದನ್ನು ಪ್ರತಿಯೊಬ್ಬ ಭಾರತೀಯ ಕೊಂಡಾಡುತ್ತಿದ್ದಾನೆ ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರದ ನೇತೃತ್ವವನ್ನು ಇಬ್ಬರು ಮಹಿಳಾ ಅಧಿಕಾರಿಗಳು ವಹಿಸಿದ್ದ್ದು ಮತ್ತೂ ವಿಶೇಷ ಎಂದು ನಿಖಿಲ್ ಹೇಳಿದರು.

ಇದನ್ನೂ ಓದಿ: ಬಿಜೆಪಿ ಜೊತೆ ವಿಲೀನಗೊಳ್ಳುವ ಚಾನ್ಸೇ ಇಲ್ಲ, ಅವರೊಂದಿಗೆ ಕೇವಲ ಮೈತ್ರಿ ಮಾತ್ರ: ನಿಖಿಲ್ ಕುಮಾರಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ