Jammu and Kashmir: ಮೊಟ್ಟೆಗಳನ್ನು ಮರಿಯಾಗಿಸಲು 10-ವರ್ಷದ ಪೋರನೊಬ್ಬ ಕಡಿಮೆ ವೆಚ್ಚದ ಇನ್ಕ್ಯೂಬೇಟರೊಂದನ್ನು ವಿನ್ಯಾಸಗೊಳಿಸಿದ್ದಾನೆ

Jammu and Kashmir: ಮೊಟ್ಟೆಗಳನ್ನು ಮರಿಯಾಗಿಸಲು 10-ವರ್ಷದ ಪೋರನೊಬ್ಬ ಕಡಿಮೆ ವೆಚ್ಚದ ಇನ್ಕ್ಯೂಬೇಟರೊಂದನ್ನು ವಿನ್ಯಾಸಗೊಳಿಸಿದ್ದಾನೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 12, 2023 | 5:51 PM

ಮೋಮಿನ್ ತಯಾರಿಸಿರುವ ಇನ್ಕ್ಯೂಬೇಟರ್ ನಲ್ಲಿ ಒಂದು ಸಲಕ್ಕೆ 50 ಮೊಟ್ಟೆಗಳನ್ನಿಟ್ಟು ಸೂಕ್ತವಾದ ತಾಪಮಾನದಲ್ಲಿ ಹ್ಯಾಚ್ ಮಾಡಿಸಬಹುದು. ಮೊಟ್ಟೆ ಮರಿಯಾಗಲು 18 ದಿನಗಳ ಸಮಯ ಹಿಡಿಯುತ್ತದೆ.

ಕುಲ್ಗಾಮ್ (ಜಮ್ಮು ಮತ್ತು ಕಾಶ್ಮೀರ):  ಕೋಳಿ ಮತ್ತು ಅವುಗಳ ಮೊಟ್ಟೆಗಳ ಬಗ್ಗೆ ವ್ಯಾಮೋಹ ಬೆಳೆಸಿಕೊಂಡ 10-ವರ್ಷದ ಪೋರನೊಬ್ಬ ಮೊಟ್ಟೆಗಳನ್ನು ಮರಿಗಳಾಗಿಸುವ ಒಂದು ಕಡಿಮೆ ವೆಚ್ಚದ ಇನ್ಕ್ಯೂಬೇಟರ್ ವಿನ್ಯಾಸಗೊಳಿಸಿದ್ದಾನೆ ಅಂದರೆ ನಂಬುವಿರಾ? ದಕ್ಷಿಣ ಕಾಶ್ಮೀರ ಕುಲ್ಗಾಮ್ ಜಿಲ್ಲೆಯ ಮುನಾದ್ (Munad) ಊರಲ್ಲಿರುವ ಸರ್ಕರೀ ಶಾಲೆಯೊಂದರಲ್ಲಿ 2 ನೇ ತರಗತಿ ವಿದ್ಯಾರ್ಥಿಯಾಗಿರುವ ಮೋಮಿನ್ ಇಶಾಕ್ ತೀಲಿ (Momin Ishaq Teeli) ಮೊಟ್ಟೆಗಳನ್ನು ಮರಿಯಾಗಿಸಲು ಇನ್ಕ್ಯೂಬೇಟರ್ (incubator) ಒಂದನ್ನು ತಯಾರಿಸಿದ್ದು ಪೌಲ್ಟ್ರಿ ಉದ್ದಿಮೆಯಲ್ಲಿ ಅದು ಕ್ರಾಂತಿ ಸೃಷ್ಟಿಸಬಹುದೆಂದು ಹೇಳಲಾಗುತ್ತಿದೆ.

‘ನಾನೊಂದು ಇನ್ಕ್ಯೂಬೇಟರ್ ತಯಾರಿಸಿದ್ದೇನೆ. ನಮ್ಮ ಮನೆಯಲ್ಲಿ ಮೊಟ್ಟೆಗಳನ್ನಿಡುವ ಕೋಳಿಗಳಿವೆ. ಈ ಮೊಟ್ಟೆಗಳನ್ನು ಮರಿಗಳನ್ನಾಗಿಸುವ ಅಲೋಚನೆ ತಲೆಯಲ್ಲಿ ಹೊಳೆದಾಗ ಇನ್ಕ್ಯೂಬೇಟರ್ ತಯಾರಿಸುವ ಕೆಲಸ ಆರಂಭಿಸಿದೆ. ಇದು ತ್ರೀ-ಇನ್-ವನ್ ಇನ್ಕ್ಯೂಬೇಟರ್; ಇದರಿಂದ ಫೋನ್ಗಳನ್ನಿ ಚಾರ್ಜ್ ಮಾಡಬಹುದು ಮತ್ತು ಮೊಟ್ಟೆಗಳಿಗೆ ಕಾವು ಒದಗಿಸಿ ಕೋಳಿಮರಿಗಳನ್ನಾಗಿಸಬಹುದು,’ ಎಂದು ಮೋಮಿನ್ ಹೇಳುತ್ತಾನೆ.

ಇದನ್ನೂ ಓದಿ:  Vibrant Village Program: ಅರುಣಾಚಲ ಪ್ರದೇಶದಲ್ಲಿ ವೈಬ್ರೆಂಟ್ ವಿಲೇಜ್ ಕಾರ್ಯಕ್ರಮಕ್ಕೆ ಅಮಿತ್ ಶಾ ಚಾಲನೆ

ಮೊಟ್ಟೆಗಳಿಂದ ಮರಿಗಳು ಹೊರಬರಲು ಸಾಕಷ್ಟು ಸಮಯ ಹಿಡಿಯುತ್ತಿದ್ದ ಅಂಶವೇ ಮೋಮಿನ್ ಗೆ ಇನ್ಕ್ಯೂಬೇಟರ್ ತಯಾರಿಸಲು ಪ್ರೇರಣೆ ನೀಡಿದೆ. ಉದ್ಯಮಗಳಲ್ಲಿ ಬಳಸುವ ಇನ್ಕ್ಯೂಬೇಟರ್ ಗಳು ದೊಡ್ಡವು ಮತ್ತು ದುಬಾರಿಯಾಗಿರುವುದನ್ನು ಮನಗಂಡ ಈ ಬಾಲಕ ತನ್ನದೇ ಆದ ಚಿಕ್ಕ ಮತ್ತು ಕಡಿಮೆ ವೆಚ್ಚದ ಇನ್ಕ್ಯೂಬೇಟರ್ ವಿನ್ಯಾಸಗೊಳಿಸಿದ್ದಾನೆ.

ಮೋಮಿನ್ ತಯಾರಿಸಿರುವ ಇನ್ಕ್ಯೂಬೇಟರ್ ನಲ್ಲಿ ಒಂದು ಸಲಕ್ಕೆ 50 ಮೊಟ್ಟೆಗಳನ್ನಿಟ್ಟು ಸೂಕ್ತವಾದ ತಾಪಮಾನದಲ್ಲಿ ಹ್ಯಾಚ್ ಮಾಡಿಸಬಹುದು. ಮೊಟ್ಟೆ ಮರಿಯಾಗಲು 18 ದಿನಗಳ ಸಮಯ ಹಿಡಿಯುತ್ತದೆ.

‘ಮೋಮಿನ್ 2-3 ವರ್ಷಗಳಿಂದ ಇನ್ಕ್ಯೂಬೇಟರ್ ತಯಾರಿಸುವ ಕೆಲಸದಲ್ಲಿ ತೊಡಗಿದ್ದ. ಅವನಿಗೆ ಅಗತ್ಯವಿದ್ದ ಬಿಡಿಭಾಗಗಳನ್ನು ನಾನು ಒದಗಿಸಿದೆ. ಅವನು ಸಾಮಾನುಗಳನ್ನು ಅಸೆಂಬ್ಲ್ ಮಾಡುವುದರ ಜೊತೆಗೆ ವೈರಿಂಗ್ ಕೆಲಸವನ್ನು ಸಹ ತಾನೇ ಮಾಡಿಕೊಂಡ,’ ಎಂದು ಮೋಮಿನ್ ತಂದೆ ಮೊಹ್ನಿಸ್ಸಾರ್ ತೀಲಿ ಹೇಳುತ್ತಾರೆ.

ಇದನ್ನೂ ಓದಿ: IPL 2023: RCB ಸೋಲುತ್ತಿದ್ದಂತೆ ಕಣ್ಣೀರಿಟ್ಟ ಹುಡುಗಿಯ ಫೋಟೋ ಫುಲ್ ವೈರಲ್

ಇದುವರೆಗೆ ಯಾವುದೇ ಕಂಪನಿ ದೊಡ್ಡ ಪ್ರಮಾಣದಲ್ಲಿ ಇನ್ಕ್ಯೂಬೇಟರ್ ತಯಾರಿಸಿಕೊಡುವಂತೆ ಮೋಮಿನನ್ನು ಸಂಪರ್ಕಿಸಿಲ್ಲ. ಆದರೆ ತನ್ನ ವಿನ್ಯಾಸದಿಂದ ಬೇರೆ ಪ್ರಯೋಜನ ಪಡೆದುಕೊಳ್ಳುವ ನಿರೀಕ್ಷೆಯನ್ನು ಮೋಮಿನ್ ಇಟ್ಟಿಕೊಂಡಿದ್ದಾನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ