Karnataka Bypolls: ಉಪ ಚುನಾವಣೆಯ ಮತದಾನಕ್ಕೆ ತೊಂದರೆಯಾಗದಂತೆ ಊರಹಬ್ಬ ಆಚರಣೆ ಎನ್ನುತ್ತಾರೆ ಗ್ರಾಮಸ್ಥರು
Karnataka Bypolls: ಜಾತ್ರೆಗೆ ಬೇರೆ ಊರಿಂದ ಬಂದಿರುವ ಜನ ತಮ್ಮೂರಲ್ಲಿ ಮತ ಚಲಾಯಿಸಿ ಬಂದಿದ್ದಾರೆ. ಸಿದ್ದಾಪುರದ ಜನರಲ್ಲಿ ಕೆಲವರು ವೋಟು ಮಾಡಿದ್ದರೆ ಕೆಲವರು ಇನ್ನೂ ಮಾಡಿಲ್ಲ. ಊರಿನ ಮತಗಟ್ಟೆಗಳು ಯಾಕೆ ಖಾಲಿ ಹೊಡೆಯುತ್ತಿವೆ ಎಂದು ನಮ್ಮ ವರದಿಗಾರ ಅಲ್ಲಿಗೆ ತೆರಳಿದಾಗ ಊರಹಬ್ಬ ನಡೆಯುತ್ತಿರುವ ವಿಷಯ ಬೆಳಕಿಗೆ ಬಂದಿದೆ.
ಬಳ್ಳಾರಿ: ಎರಡೂ ಐದು ವರ್ಷಗಳಿಗೊಮ್ಮೆ ನಡೆಯುತ್ತವೆ-ವಿಧಾನಸಭಾ ಚುನಾವಣೆ ಮತ್ತು ಸಂಡೂರು ಕ್ಷೇತ್ರದಲ್ಲಿರುವ ಸಿದ್ದಾಪುರ ಗ್ರಾಮದ ಜಾತ್ರಾ ಮಹೋತ್ಸವ! ಆದರೆ, ಸಂಡೂರಲ್ಲಿ ಈ ಬಾರಿ ಚುನಾವಣೆ ಒಂದೂವರೆ ವರ್ಷಕ್ಕೆಲ್ಲ ಬಂದುಬಿಟ್ಟಿದೆ. ಹಾಗಾಗಿ ಸಿದ್ದಾಪುರದ ಜನ ಪ್ರಜಾಪ್ರಭುತ್ವದ ಹಬ್ಬ ಮತ್ತು ಊರ ಹಬ್ಬ ಎರಡನ್ನೂ ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಚುನಾವಣೆಗೆ ಯಾವುದೇ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸಂಡೂರು ಉಪ ಚುನಾವಣೆ: ಪತಿ ತುಕಾರಾಂ ಜೊತೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ ಅನ್ನಪೂರ್ಣ ತುಕಾರಾಂ
Latest Videos