ಕೆಆರ್ ಮಾರ್ಕೆಟ್ ಹೂ ವ್ಯಾಪಾರಿಗಳು ಗ್ರಾಹಕರಿಲ್ಲದೆ ಹತಾಶ, ಮಳೆಯಿಂದಾಗಿ ಮನೆಯಿಂದ ಹೊರಬೀಳದ ಜನ
ಮಳೆಯ ಮಾತು ಒಂದೆಡೆಯಿರಲಿ, ಕನಿಷ್ಟ ಮಾರ್ಕೆಟ್ ತಲುಪುವ ರಸ್ತೆಗಳಾದರೂ ಒಪ್ಪವಾಗಿದ್ದರೆ ಜನ ಕೊಡೆ ಹಿಡಿದು, ಜರ್ಕಿನ್ ಧರಿಸಿ, ರೇನ್ ಕೋಟ್ ಗಳನ್ನು ಮೇಮೇಲೆ ಎಳೆದುಕೊಂಡು ಬಂದಾರು. ಬೆಂಗಳೂರು ನಿವಾಸಿಗಳಿಗೆ ಅದೂ ನಸೀಬಿಲ್ಲ. ರಸ್ತೆಗಳು ಅಧ್ವಾನ ಎದ್ದುಹೋಗಿವೆ ಅಂತ ಹೇಳಿದರೆ ಅದು ಅಂಟರ್ಸ್ಟೇಟ್ಮೆಂಟ್! ವ್ಯಾಪಾರಿಗಳು ಘನಸರ್ಕಾರವನ್ನು ಶಪಿಸದೆ ಏನು ಮಾಡುತ್ತಾರೆ?
ಬೆಂಗಳೂರು, ಮೇ 20: ಬೆಂಗಳೂರಲ್ಲಿ ನಿರ್ದಯತೆಯಿಂದ ಸುರಿಯುತ್ತಿರುವ ಮಳೆಗೆ ಕಚೇರಿಗಳಿಗೆ ಹೋಗುವವರ ಪರದಾಟ ಒಂದು ಕತೆಯಾದರೆ, ನಗರದ ಐಕಾನಿಕ್ ಕೆಆರ್ ಮಾರ್ಕೆಟ್ ನಲ್ಲಿ ಗ್ರಾಹಕರ ಸುಳಿವಿಲ್ಲದ ಕಾರಣ ವ್ಯಾಪಾರವಿಲ್ಲದೆ ಹತಾಶರಾಗಿರುವ ಹೂವಿನ ವ್ಯಾಪಾರಿಗಳದ್ದು ಮತ್ತೊಂದು ಕತೆ. ವ್ಯಾಪಾರಸ್ಥರು ರಾಶಿರಾಶಿ ಹೂಗಳನ್ನು ಮುಂದಿಟ್ಟುಕೊಂಡು ಕೊಳ್ಳುವವರಿಗಾಗಿ ಕಾಯುತ್ತಿದ್ದಾರೆ. ಆದರೆ, ಬೆಳಗ್ಗೆಯಿಂದ ಒಂದೇ ಸಮನೆ ಧೋ ಅಂತ ಸುರಿಯುತ್ತಿರುವ ಮಳೆಯಲ್ಲಿ ಯಾರು ತಾನೇ ಹೂ ಖರೀದಿಸಲು ಬಂದಾರು? ಹೂವಿನ ವ್ಯಾಪಾರಿಗಳ ಬವಣೆಯನ್ನು ಟಿವಿ9 ವರದಿಗಾರ ವಿಡಿಯೋದಲ್ಲಿ ವಿವರಿಸಿದ್ದಾರೆ.
ಇದನ್ನೂ ಓದಿ: ಮಳೆ ಸೃಷ್ಟಿಸಿರುವ ಅವಾಂತರಗಳನ್ನು ಬಿಬಿಎಂಪಿ ವಾರ್ರೂಮಲ್ಲಿ ಕೂತು ನೋಡಿದರೆ ಪರಿಹಾರಗಳು ಸಿಗುತ್ತವೆಯೇ?
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ