AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಪ್ರಜಾಸೇವಕ ಎಂದು ಸಿಎಂ ಹೇಳಿರುವುದೇ ತಪ್ಪು’: ಬಸವರಾಜ್ ಹೊರಟ್ಟಿ ಗರಂ

‘ನಾನು ಪ್ರಜಾಸೇವಕ ಎಂದು ಸಿಎಂ ಹೇಳಿರುವುದೇ ತಪ್ಪು’: ಬಸವರಾಜ್ ಹೊರಟ್ಟಿ ಗರಂ

ಕಿರಣ್​ ಹನಿಯಡ್ಕ
| Edited By: |

Updated on: Sep 06, 2026 | 5:47 PM

Share

ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಭಾಗವಹಿಸಿದ ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ, ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಜಾಸೇವಕ ಹೇಳಿಕೆ ಕೃತಿಗೆ ಬರಬೇಕು ಎಂದು ಒತ್ತಿ ಹೇಳಿದ ಹೊರಟ್ಟಿ, ಶಿಕ್ಷಕರಿಗೆ ಟಿ.ಆರ್ ಬಿರುದು ನೀಡಿರುವುದನ್ನೂ ತಪ್ಪು ಎಂದಿದ್ದಾರೆ.

ಕೊಪ್ಪಳ, ಸೆಪ್ಟೆಂಬರ್​ 06: ‘ನಾನು ಪ್ರಜಾಸೇವಕ ಎಂದು ಸಿಎಂ ಡಿಕೆ ಶಿವಕುಮಾರ್​ ಹೇಳಿರುವುದೇ ತಪ್ಪು’ ಎಂದು ಮಾಜಿ ಸಭಾಪತಿ ಬಸವರಾಜ್​​​ ಹೊರಟ್ಟಿ ಕಿಡಿಕಾರಿದ್ದಾರೆ. ನಿನ್ನೆ ಪ್ರಜಾಸೇವಾ ಅಭಿಯಾನದ ವೇಳೆ  ‘ನನ್ನನ್ನು ನಾಡಿನ ದೊರೆ ಎನ್ನಬೇಡಿ, ಪ್ರಜಾಸೇವಕ ಎನ್ನಿ’ ಎಂದು ಡಿಕೆ ಶಿವಕುಮಾರ್​​ ಹೇಳಿಕೆಗೆ ಗಂಗಾವತಿಯಲ್ಲಿ ಟಿವಿ9ಗೆ ಪ್ರತಿಕ್ರಿಯಿಸಿದ ಬಸವರಾಜ್​​​ ಹೊರಟ್ಟಿ, ‘ಕೇವಲ ಬಾಯಿಮಾತಿನ ಘೋಷಣೆಗಳಿಂದ ಪ್ರಯೋಜನವಿಲ್ಲ, ಕೃತಿಯಲ್ಲಿ ಮಾಡಿ ತೋರಿಸಬೇಕು. ಪ್ರಜಾಸೇವಕ ಎಂದ ಮಾತ್ರಕ್ಕೆ ಮುಖ್ಯಮಂತ್ರಿ ಕುರ್ಚಿ ಬಿಟ್ಟು ಕೆಳಗೆ ಕೂರುತ್ತಾರೆಯೇ ಎಂದು ಪ್ರಶ್ನಿಸಿದರು. ನಾನು ಪ್ರಜಾಸೇವಕ ಎಂದು ಸಿಎಂ ಹೇಳಿರುವುದು ತಪ್ಪು’ ಎಂದು ಗುಡುಗಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us