ಹಾಸನ ದುರಂತ: ಪರಿಹಾರ ಜಟಾಪಟಿಯಲ್ಲಿ ಸಿದ್ದರಾಮಯ್ಯ ಪರ ದೇವೇಗೌಡ ಬ್ಯಾಟಿಂಗ್

Updated on: Sep 14, 2025 | 3:37 PM

ಹಾಸನದ ಮೊಸಳೆಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ಮೇಲೆ ಕ್ಯಾಂಟರ್ ಹರಿದು 10 ಜನರು ಮೃತಪಟ್ಟಿದ್ದು, ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ದುರಂತದಿಂದಾಗಿ ಮೊಸಳೆಹೊಸಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇನ್ನು ಮೃತ ಕುಟುಂಬಗಳಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಘೋಷಿಸಿದೆ. ಆದ್ರೆ, ಪರಿಹಾರ ಹಣವನ್ನು ಹೆಚ್ಚಿಸಬೇಕೆಂಬ ಕೂಗು ಕೇಳಿಬರುತ್ತಿವೆ. ಪ್ರತಿಯೊಬ್ಬರಿಗೂ 10ರಿಂದ 15 ಲಕ್ಷ ನೀಡಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಕೇರಳ ಆನೆಗೆ ಬಲಿಯಾದ ಕುಟುಂಭಕ್ಕೆ 15 ಲಕ್ಷ ಕೊಟ್ಟಿದ್ದೀರಿ. ಕರ್ನಾಟಕದವರಿಗೆ ಏಕೆ ಕೊಡಲು ಎಂಬ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುತ್ತಿದ್ದಾರೆ. ಇನ್ನು ಈ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರು ಸಿದ್ದರಾಮಯ್ಯ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ.

ಹಾಸನ, (ಸೆಪ್ಟೆಂಬರ್ 14): ಹಾಸನದ ಮೊಸಳೆಹೊಸಳ್ಳಿಯಲ್ಲಿ ಗಣೇಶ ಮೆರವಣಿಗೆ ಮೇಲೆ ಕ್ಯಾಂಟರ್ ಹರಿದು 10 ಜನರು ಮೃತಪಟ್ಟಿದ್ದು, ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ದುರಂತದಿಂದಾಗಿ ಮೊಸಳೆಹೊಸಳ್ಳಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇನ್ನು ಮೃತ ಕುಟುಂಬಗಳಿಗೆ ರಾಜ್ಯ ಸರ್ಕಾರ 5 ಲಕ್ಷ ರೂಪಾಯಿ ಘೋಷಿಸಿದೆ. ಆದ್ರೆ, ಪರಿಹಾರ ಹಣವನ್ನು ಹೆಚ್ಚಿಸಬೇಕೆಂಬ ಕೂಗು ಕೇಳಿಬರುತ್ತಿವೆ. ಪ್ರತಿಯೊಬ್ಬರಿಗೂ 10ರಿಂದ 15 ಲಕ್ಷ ನೀಡಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿವೆ. ಕೇರಳ ಆನೆಗೆ ಬಲಿಯಾದ ಕುಟುಂಭಕ್ಕೆ 15 ಲಕ್ಷ ಕೊಟ್ಟಿದ್ದೀರಿ. ಕರ್ನಾಟಕದವರಿಗೆ ಏಕೆ ಕೊಡಲು ಎಂಬ ಪ್ರಶ್ನೆಗಳನ್ನು ಸರ್ಕಾರಕ್ಕೆ ಕೇಳುತ್ತಿದ್ದಾರೆ. ಇನ್ನು ಈ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರು ಸಿದ್ದರಾಮಯ್ಯ ಸರ್ಕಾರದ ಪರ ಬ್ಯಾಟಿಂಗ್ ಮಾಡಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್​​ ಡಿ ದೇವೇಗೌಡ, ಮೃತರ ಕುಟುಂಬಕ್ಕೆ ಸಿಎಂ ತಲಾ 5 ಲಕ್ಷ ಪರಿಹಾರ ಘೋಷಿಸಿದ್ದಾರೆ. ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕೆಂಬ ಬೇಡಿಕೆ ಇದೆ. ಆದ್ರೆ, ಸರ್ಕಾರಕ್ಕೂ ಕೆಲ ಇತಿಮಿತಿ ಇರುತ್ತೆ, ಅಪಘಾತಕ್ಕೆ ನಾನಾ ಕಾರಣವಿದೆ.ನಮ್ಮ ರಾಜ್ಯದ ಅಭ್ಯುದಯದ ಬಗ್ಗೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ಈ ವಿಚಾರದಲ್ಲಿ ನಾನು ರಾಜಕೀಯವಾಗಿ ಮಾತನಾಡಲ್ಲ ಎಂದರು.

ಮೊಸಳೆಹೊಸಳ್ಳಿಯಲ್ಲಿ ನಡೆದ ದುರಂತದಲ್ಲಿ ಹತ್ತು ಜನರ ಸಾವಾಗಿದೆ. ನಿನ್ನೆ ಗಾಯಾಳುಗಳನ್ನು ಭೇಟಿಯಾಗಿ ಪಕ್ಷದಿಂದ ನೆರವು ನೀಡಿದ್ದೇವೆ. ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 1 ಲಕ್ಷ ರೂ. ನೆರವು ಹಾಗೂ ಗಂಭೀರ ಗಾಯಗೊಂಡವರಿಗೆ ತಲಾ 25 ಸಾವಿರ ನೆರವು ನೀಡಿದ್ದೇವೆ. ಬೆಳಗ್ಗೆ ಮೃತರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಬಂದಿದ್ದೇನೆ ಎಂದು ಹೇಳಿದರು.