AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?: ಖಾಕಿ ವಿರುದ್ಧವೇ ಗಂಭೀರ ಆರೋಪ!

ಕಳುವಾಗಿದ್ದ ಬಂಗಾರ, ಹಣ ರಿಕವರಿ ಮಾಡಿ ಪೊಲೀಸರಿಂದಲೇ ಲೂಟಿ?: ಖಾಕಿ ವಿರುದ್ಧವೇ ಗಂಭೀರ ಆರೋಪ!

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Sep 03, 2026 | 4:11 PM

Share

ಗದಗದಲ್ಲಿ ನಡೆದ ಕೋಟ್ಯಂತರ ರೂಪಾಯಿ ಚಿನ್ನ, ಬೆಳ್ಳಿ, ನಗದು ಕಳ್ಳತನ ಪ್ರಕರಣದಲ್ಲಿ, ಸಿಪಿಐ ಶಿವಯೋಗಿ ಅವರು ಕಳುವಾದ ವಸ್ತುಗಳನ್ನು ವಶಪಡಿಸಿಕೊಂಡರೂ ವಾಪಸ್ ನೀಡಿಲ್ಲ ಎಂದು ತುಳಜಾಬಾಯಿ ಮುಳುಗುಂದ ಆರೋಪಿಸಿದ್ದಾರೆ. ಎರಡು ವರ್ಷಗಳಿಂದ ನ್ಯಾಯ ಸಿಗದೆ, ಪೊಲೀಸ್ ಇಲಾಖೆಯ ನಡವಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತುಳಜಾಬಾಯಿ ಮುಳುಗುಂದ ಅವರು ಸಾರ್ವಜನಿಕವಾಗಿ ಹಾಲಿ ಗದಗ ಶಹರ ಠಾಣೆ ಸಿಪಿಐ ಆಗಿರುವ ಶಿವಯೋಗಿ ಅವರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಗದಗ, ಸೆಪ್ಟೆಂಬರ್​​ 03: ಗದಗದಲ್ಲಿ 2024ರ ಫೆಬ್ರವರಿಯಲ್ಲಿ ನಡೆದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಕಳ್ಳತನ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಸಂತ್ರಸ್ತರಾದ ತುಳಜಾಬಾಯಿ ಮುಳುಗುಂದ ಎಂಬ ಮಹಿಳೆ ಹಾಗೂ ಅವರ ಪುತ್ರ, ಆಗ ಗದಗ ಗ್ರಾಮೀಣ ಠಾಣೆಯ ಸಿಪಿಐ ಆಗಿದ್ದ ಶಿವಯೋಗಿ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಸುಮಾರು 1 ಕೆಜಿ ಚಿನ್ನ, 1.5 ಕೆಜಿ ಬೆಳ್ಳಿ ಹಾಗೂ 36 ಲಕ್ಷ ರೂಪಾಯಿ ನಗದು ಕಳ್ಳತನ ನಡೆದಿತ್ತು. ಕಳುವಾದ ಈ ವಸ್ತುಗಳನ್ನು ಪತ್ತೆ ಹಚ್ಚಲಾಗಿದ್ದು, ಅವುಗಳನ್ನು ವಾಪಸ್ ನೀಡುವುದಾಗಿ ಶಿವಯೋಗಿ ಭರವಸೆ ನೀಡಿದ್ದರು. ಆದರೆ, ಎರಡು ವರ್ಷ ಕಳೆದರೂ ಆ ಸ್ವತ್ತುಗಳನ್ನು ಕುಟುಂಬಕ್ಕೆ ಹಿಂದಿರುಗಿಸಿಲ್ಲ. ಹೀಗಾಗಿ ಪೊಲೀಸರ ಮೇಲೆಯೇ ನಮಗೆ ಅನುಮಾನ ಇದೆ ಎಂದು ತಾಯಿ-ಮಗ ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ  ಹಾಲಿ ಗದಗ ಶಹರ ಠಾಣೆ ಸಿಪಿಐ ಆಗಿರುವ ಶಿವಯೋಗಿ ಅವರನ್ನು ತುಳಜಾಬಾಯಿ ಮುಳುಗುಂದ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Follow Us