
ಬಿಗ್ ಬಾಸ್ ಕನ್ನಡ ಸೀಸನ್ 12ರ (BBK 12) ರೇಸ್ನಲ್ಲಿ ಗಿಲ್ಲಿ ನಟ ಕಠಿಣ ಸ್ಪರ್ಧೆಯನ್ನೇ ನೀಡುತ್ತಿದ್ದಾರೆ. ಅವರು ಗೆಲ್ಲಬೇಕು ಎಂಬ ಪ್ರಾರ್ಥನೆಯನ್ನು ಫ್ಯಾನ್ಸ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ಗಿಲ್ಲಿ ನಟ ಇಟ್ಟ ಒಂದು ಬೇಡಿಕೆಯನ್ನು ಫ್ಯಾನ್ಸ್ ಹೊರಗೆ ಈಡೇರಿಸಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಗಿಲ್ಲಿ ಆಸೆ ಪೂರ್ಣಗೊಳ್ಳಲಿದೆ. ಹಾಗಾದರೆ, ಗಿಲ್ಲಿ ಇಟ್ಟ ಕೋರಿಕೆ ಏನು? ಆ ಬಗ್ಗೆ ಇಲ್ಲಿದೆ ವಿವರ.
ಜನಪ್ರಿಯತೆ ಹೆಚ್ಚಾದಂತೆಲ್ಲ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತದೆ. ಇದು ಕೆಲವರಿಗೆ ಪ್ರತಿಷ್ಠೆ ಕೂಡ ಹೌದು. ಈ ಕಾರಣದಿಂದಲೇ ಬಹುತೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪೋಸ್ಟ್ಗಳನ್ನು ಹಂಚಿಕೊಂಡು ಫಾಲೋವರ್ಸ್ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಈಗ ಗಿಲ್ಲಿ ನಟ ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಒಂದು ಮಿಲಿಯನ್ (10 ಲಕ್ಷ) ಗಡಿ ತಲುಪುತ್ತಿದೆ. ಇದಕ್ಕೆ ಅವರ ಅಭಿಮಾನಿಗಳು ಆರಂಭಿಸಿದ ಆಂದೋಲನವೇ ಕಾರಣ.
ಗಿಲ್ಲಿ ನಟ ಅವರು ಇತ್ತೀಚೆಗೆ ಕಾವ್ಯಾ ಬಳಿ ಮಾತನಾಡುತ್ತಾ, ‘ಇನ್ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಆಗಿರಬೇಕಿತ್ತು’ ಎಂದು ಹೇಳಿಕೊಂಡರು. ಇದನ್ನು ಅವರ ಅಭಿಮಾನಿಗಳು ಗಂಭೀರವಾಗಿ ಸ್ವೀಕರಿಸಿದ್ದಾರೆ. ಸದ್ಯ (ಜನವರಿ 8 ಬೆಳಿಗ್ಗೆ 9 ಗಂಟೆ) ಅವರ ಫಾಲೋವರ್ಸ್ ಸಂಖ್ಯೆ 9.36 ಲಕ್ಷ ಇದೆ. ಅನಾಯಾಸವಾಗಿ ಅವರ ಹಿಂಬಾಲಕರ ಸಂಖ್ಯೆ ಮಿಲಿಯನ್ ತಲುಪಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಧ್ರುವಂತ್-ಅಶ್ವಿನಿ ಮಧ್ಯೆಯೇ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಗಿಲ್ಲಿ ಅವರು ಬಿಗ್ ಬಾಸ್ಗೆ ಬಂದಾಗ ಅವರ ಇನ್ಸ್ಟಾ ಹಿಂಬಾಲಕರ ಸಂಖ್ಯೆ 1.69 ಲಕ್ಷ ಮಂದಿ ಇದ್ದರು. ಈಗ ಅದು ಮಿಲಿಯನ್ ತಲುಪುತ್ತಿದೆ. ಮತ್ತೊಂದು ವಿಶೇಷ ಎಂದರೆ ಕೆಲವೇ ದಿನಗಳ ಹಿಂದೆ ಅವರ ಇನ್ಸ್ಟಾ ಫಾಲೋವರ್ಸ್ ಸಂಖ್ಯೆ 6 ಲಕ್ಷ ಇತ್ತು. ಈಗ ಅಭಿಮಾನಿಗಳ ಕ್ಯಾಂಪೇನ್ ಬಳಿಕ ಆ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಫಿನಾಲೆ ಪೂರ್ಣಗೊಳ್ಳುವ ವೇಳೆಗೆ ಅವರ ಹಿಂಬಾಲಕರ ಸಂಖ್ಯೆ ಎಷ್ಟಾಗಿರುತ್ತದೆ ಎಂಬ ಕುತೂಹಲ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.