AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೂಗಲ್ ಮ್ಯಾಪ್ ತಂದ ಆಪತ್ತು! ಕಬ್ಬಿಣದ ಸರಳುಗಳಿಂದ ತುಂಬಿದ್ದ ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು

ಗೂಗಲ್ ಮ್ಯಾಪ್ ತಂದ ಆಪತ್ತು! ಕಬ್ಬಿಣದ ಸರಳುಗಳಿಂದ ತುಂಬಿದ್ದ ಲಾರಿ ಅಪಘಾತ, ಕ್ಯಾಬ್ ಚಾಲಕ ಸಾವು

Shivaprasad B
| Edited By: |

Updated on: Mar 27, 2026 | 11:22 AM

Share

ಬೆಂಗಳೂರಿನ ಕುರುಬರಹಳ್ಳಿಯಲ್ಲಿ ಗೂಗಲ್ ಮ್ಯಾಪ್ ನೋಡಿಕೊಂಡು ಕಿರಿದಾದ ಇಳಿಜಾರು ಮಾರ್ಗದಲ್ಲಿ ಬಂದ ಕಬ್ಬಿಣದ ಸರಳುಗಳ ತುಂಬಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಕ್ಯಾಬ್​ಗೆ ಡಿಕ್ಕಿಯಾಗಿ ಭೀಕರ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ 23 ವರ್ಷದ ಕ್ಯಾಬ್ ಚಾಲಕ ಅಂಬಾದಾಸ್ ಸಜೀವ ದಹನವಾಗಿದ್ದಾರೆ. ಅಪಘಾತದಲ್ಲಿ ಹಲವು ವಾಹನಗಳು ಜಖಂಗೊಂಡಿದ್ದು, ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ.

ಬೆಂಗಳೂರು, ಮಾರ್ಚ್ 27: ಬೆಂಗಳೂರಿನ ಕುರುಬರಹಳ್ಳಿಯ ಪೈಪ್‌ಲೈನ್ ರಸ್ತೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿ ಭೀಕರ ಅಪಘಾತಕ್ಕೀಡಾಗಿದೆ. ಆಂಧ್ರದಿಂದ ಸುಂಕದಕಟ್ಟೆ ಕಡೆಗೆ ಬರುತ್ತಿದ್ದ ಈ ಲಾರಿ ಗೂಗಲ್ ಮ್ಯಾಪ್ ದೋಷದಿಂದಾಗಿ ಇಳಿಜಾರು ರಸ್ತೆಯಲ್ಲಿ ಬಂದಿದೆ. ಅಸಲಿಗೆ ಲಾರಿ ಹೋಗಲು ಸೂಕ್ತವಲ್ಲದ ರಸ್ತೆ ಅದಾಗಿತ್ತು. ಅಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎದುರಿಗಿದ್ದ ಎರ್ಟಿಗಾ ಕಾರಿಗೆ ಡಿಕ್ಕಿಯಾಗಿ ತುಸು ದೂರ ಎಳೆದುಕೊಂಡು ಹೋಗಿದ್ದು, ಸ್ಕ್ರ್ಯಾಪ್ ಗೋಡೌನ್​ಗೆ ನುಗ್ಗಿದೆ. ಅಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ 23 ವರ್ಷದ ಅಂಬಾದಾಸ್ ಎಂಬ ಕ್ಯಾಬ್ ಚಾಲಕ ಕಾರಿನಲ್ಲಿ ಸಜೀವ ದಹನವಾಗಿದ್ದಾರೆ.

ಅಪಘಾತದಲ್ಲಿ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಆತನನ್ನು ರಕ್ಷಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us