ಚಾಮುಂಡಿದೇವಿ ದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡದ ಸರ್ಕಾರ, ಮಹಿಳೆಯರಿಗೆ ವಾಷ್ರೂಮ್ ಕೂಡ ಬೇಡವೇ?
ಚಾಮುಂಡಿ ದೇವಿಯ ದರ್ಶನಕ್ಕಾಗಿ ಹಣ ತೆತ್ತವರಿಗೆ, ದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿ ಹಾಲು ನೀಡುವ ಭರವಸೆ ನೀಡಲಾಗಿತ್ತಂತೆ, ಅದರೆ ಒಂದನ್ನೂ ನೀಡಿಲ್ಲ ಎಂದು ಒಬ್ಬ ಭಕ್ತ ಹೇಳುತ್ತಾರೆ. ಕುಡಿಯುವ ನೀರಿನ ವ್ಯವಸ್ಥೆಯೂ ಬೆಟ್ಟದಲ್ಲಿಲ್ಲ. ವಿಐಪಿಗಳೆಂದು ಹೇಳಿಕೊಂಡು ನುಗ್ಗುವವರಿಂದ ಬೇರೆಯವರಿಗೆ ಅಪಾಯವಿದೆ. ಸಾಕಷ್ಟು ಪ್ರಮಾಣದಲ್ಲಿ ನಿಯೋಜನೆಗೊಂಡಿರುವ ಪೊಲೀಸರು ಇಂಥವರನ್ನು ಮುಲಾಜಿಲ್ಲದೆ ದಂಡಿಸಬೇಕು.
ಮೈಸೂರು, ಜೂನ್ 27: ಕರ್ನಾಟಕ ಸರ್ಕಾರ ಯಾವುದನ್ನು ಸಮರ್ಪಕವಾಗಿ ಮಾಡುತ್ತದೆ ಅಂತ ಚಾಮುಂಡಿ ತಾಯಿಯೇ ಹೇಳಬೇಕು. ಇಲ್ನೋಡಿ, ನಿನ್ನೆ ರಾತ್ರಿಯಿಂದ ನಾಡದೇವತೆಯ ದರ್ಶನ ಮಾಡಿಕೊಳ್ಳಬೇಕೆಂದು ಸಾಲಲ್ಲಿ ನಿಂತವರು ಇನ್ನೂ ದರ್ಶನಕ್ಕಾಗಿ ಕಾಯುತ್ತಲೇ ಇದ್ದಾರೆ. ನಮ್ಮ ವರದಿಗಾರನೊಂದಿಗೆ ಮಾತಾಡಿರುವ ಒಬ್ಬಯುವತಿ ಆಕ್ರೋಶವನ್ನು ಹೊರಹಾಕಿದ್ದಾರೆ. ಇವರು ₹ 300 ಕೊಟ್ಟು ದಾರ್ಶನಕ್ಕಾಗಿ ಬಂದಿದ್ದರೂ ಉಚಿತವಾಗಿ ಬಂದವರ ಸಾಲಿನಲ್ಲೇ ಕಳಿಸಲಾಗುತ್ತಿದೆಯಂತೆ. ಯಾರ‍್ಯಾರೋ ವಿಐಪಿಗಳು (VIPs) ಅಂತ ಹೇಳಿಕೊಂಡು ದರ್ಶನಕ್ಕಾಗಿ ನುಗ್ಗುತ್ತಿದ್ದಾರೆ. ತನ್ನ ದರ್ಶನಕ್ಕಾಗಿ ಸುಳ್ಳು ಹೇಳುವವರನ್ನು ಚಾಮುಂಡಿ ತಾಯಿ ಹರಸುತ್ತಾಳೆಯೇ? ಅಲ್ಲಾ ಸ್ವಾಮಿ, ಬೆಟ್ಟದ ಮೇಲೆ ಮಹಿಳೆಯರಿಗಾಗಿ ವಾಷ್ರೂಂ ವ್ಯವಸ್ಥೆ ಮಾಡಿಲ್ಲವೆಂದರೆ ಹೇಗೆ? ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೆವಪ್ಪ ಸಿಎಂ ಜೊತೆ ದೆಹಲಿ ಹೋಗುವ ಬದಲು ಇಲ್ಲಿದ್ದುಕೊಂಡು ವ್ಯವಸ್ಥೆಗಳ ಏರ್ಪಾಟು ಮಾಡಬೇಕಿತ್ತು.
ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಆಷಾಢ ಮೊದಲ ಶುಕ್ರವಾರ ಸಂಭ್ರಮ: ಶಕ್ತಿ ದೇವತೆ ಆರಾಧನೆಯ ಪ್ರಯೋಜನಗಳೇನು ನೋಡಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ