ಜಿಟಿ ದೇವೇಗೌಡ ತಮ್ಮ ಮಗಳು ಮತ್ತು ಅಳಿಯನಿಗಾಗಿ ಮುಡಾದಿಂದ ಅಕ್ರಮವಾಗಿ ಸೈಟು ಖರೀದಿಸಿದ್ದಾರೆ: ಸ್ನೇಹಮಯಿ ಕೃಷ್ಣ

|

Updated on: Jan 11, 2025 | 11:24 AM

ಮುಡಾ ಹಗರಣದ ತನಿಖೆಯನ್ನು ಮೈಸೂರು ಲೋಕಾಯುಕ್ತ ಮಾಡುತ್ತಿರುವುದರಿಂದ ತನ್ನ ಹೊಸ ದೂರುಗಳನ್ನು ಅವರಿಗೆ ನೀಡಿ ಹಳೆಯ ದೂರುಗಳಿಗೆ ಸೇರಿಸಬೇಕೆಂದು ಮನವಿ ಮಾಡಿರುವೆ ಎಂದು ಸ್ನೇಹಮಯಿ ಕೃಷ್ಣ ಹೇಳುತ್ತಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಅರ್ಜಿ ಸಲ್ಲಿಸಿದ್ದೇನೆ, ಅದರೆ ಸದ್ಯಕ್ಕೆ ಲೋಕಾಯುಕ್ತದವರೇ ತನಿಖೆ ಮಾಡುತ್ತಿದ್ದಾರೆ, ಹಾಗಾಗಿ ಅವರಿಗೆ ದೂರು ನೀಡಿದ್ದೇನೆ ಅಂತ ಅವರು ಹೇಳುತ್ತಾರೆ.

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿ 50:50 ಅನುಪಾತದಲ್ಲಿ ಸೈಟುಗಳನ್ನು ಪಡೆದಿರುವವರ ವಿರುದ್ಧ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೋರಾಟ ಮುಂದುವರಿಸಿದ್ದಾರೆ. ಮೈಸೂರಲ್ಲಿ ನಮ್ಮ ಪ್ರತಿನಿಧಿ ಜೊತೆ ಮಾತಾಡಿರುವ ಅವರು ಜೆಡಿಎಸ್ ಮುಖಂಡ ಜಿಟಿ ದೇವೇಗೌಡ ಸಹ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ತಮ್ಮ ಮಗಳು ಮತ್ತು ಅಳಿಯನಿಗಾಗಿ ದೊಡ್ಡ ಸೈಜಿನ ಸೈಟನ್ನು ಖರೀದಿಸಿದ್ದಾರೆಂದು ಲೋಕಾಯುಕ್ತಗೆ ದೂರು ನೀಡಿರುವುದಾಗಿ ಹೇಳುತ್ತಾರೆ. ಮುಡಾ ಅಧಿಕಾರಿಗಳಿಗೆ ಖೊಟ್ಟಿ ಕಾಗದ ಪತ್ರಗಳು ಸಲ್ಲಿಕೆ ವಿಷಯ ಗೊತ್ತಿದ್ದರೂ ಹಣದಾಸೆಯಿಂದ ಅಕ್ರಮಗಳಲ್ಲಿ ಶಾಮೀಲಾಗುತ್ತಿದ್ದಾರೆ, ತಾಯಿಯ ಒಡಲನ್ನೇ ಬಗೆಯುವುದು ಅನ್ನುತ್ತಾರಲ್ಲ, ಅಂಥ ಹೀನ ಕೃತ್ಯವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಕೃಷ್ಣ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಮೈಸೂರು ರಸ್ತೆಗೆ ಸಿದ್ದರಾಮಯ್ಯ ಹೆಸರು ಪ್ರಸ್ತಾವ: ಕೂಡಲೇ ಪ್ರಿನ್ಸೆಸ್ ರೋಡ್ ಫಲಕ ಅಳವಡಿಸಲು ಸ್ನೇಹಮಯಿ ಕೃಷ್ಣ ಆಗ್ರಹ