ಹಾಸನಾಂಬೆ ಸನ್ನಿಧಿಯಲ್ಲಿ ಧರ್ಮದರ್ಶನ ಸಾಲು ಖಾಲಿ ಖಾಲಿ! ಯಾಕೆ ಗೊತ್ತಾ?

Edited By:

Updated on: Nov 04, 2026 | 10:59 AM

ಹಾಸನಾಂಬೆ ದರ್ಶನೋತ್ಸವದ ಆರನೇ ದಿನ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಧರ್ಮದರ್ಶನದ ಸರತಿ ಸಾಲುಗಳು ಬಹುತೇಕ ಖಾಲಿಯಾಗಿದ್ದು, ಭಕ್ತರು ಅರ್ಧ ಗಂಟೆಯಲ್ಲೇ ನೇರವಾಗಿ ಗರ್ಭಗುಡಿ ತಲುಪಿ ದರ್ಶನ ಪಡೆಯುತ್ತಿದ್ದಾರೆ. ವಾರದ ದಿನ ಮತ್ತು ಹಬ್ಬದ ರಜೆಗಳ ಪೂರ್ವದ ಕಾರಣದಿಂದ ಈ ಪರಿಸ್ಥಿತಿ ಉಂಟಾಗಿದೆ.

ಹಾಸನ, ನವೆಂಬರ್ 04: ವಾರ್ಷಿಕ ಹಾಸನಾಂಬೆ ದರ್ಶನೋತ್ಸವದ ಆರನೇ ದಿನವಾದ ಇಂದು ಭಕ್ತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ನಿನ್ನೆ ಮಧ್ಯರಾತ್ರಿವರೆಗೂ ಲಕ್ಷಾಂತರ ಭಕ್ತರಿಂದ ತುಂಬಿದ್ದ ಸರತಿ ಸಾಲುಗಳು, ಇಂದು ಬೆಳಿಗ್ಗೆ ಸಂಪೂರ್ಣವಾಗಿ ಖಾಲಿಯಾಗಿವೆ. ಅದರಲ್ಲೂ ಧರ್ಮದರ್ಶನದ ಸರತಿ ಸಾಲಿನಲ್ಲಿ ಭಕ್ತರು ಕಡಿಮೆ ಇದ್ದು, ಅರ್ಧ ಗಂಟೆಯ ಅವಧಿಯಲ್ಲೇ ನೇರವಾಗಿ ಗರ್ಭಗುಡಿ ತಲುಪಿ ದರ್ಶನ ಪಡೆಯಲು ಅವಕಾಶ ಸಿಗುತ್ತಿದೆ.

ವಾರದ ದಿನವಾದ ಬುಧವಾರದ ಕಾರಣ ಹಾಗೂ ಮುಂಬರುವ ರಜಾದಿನಗಳಿಗೆ ಪೂರ್ವಭಾವಿಯಾಗಿ ಭಕ್ತರ ಸಂಖ್ಯೆ ಕಡಿಮೆಯಾಗಿರುವ ಸಾಧ್ಯತೆಯಿದೆ. ಬೆಳಿಗ್ಗೆ 6 ಗಂಟೆಯಿಂದಲೇ ದರ್ಶನ ಆರಂಭವಾಗಿದ್ದು, 1000 ಮತ್ತು 300 ರೂಪಾಯಿಗಳ ವಿಶೇಷ ದರ್ಶನದ ಸಾಲುಗಳು ಕೂಡ ಖಾಲಿಯಾಗಿವೆ. ಇದು ಸ್ಥಳೀಯ ಭಕ್ತರಿಗೆ ಮತ್ತು ಬೆಳಿಗ್ಗೆ ಬಂದ ಭಕ್ತರಿಗೆ ಹಾಸನಾಂಬೆಯ ಸುಲಭ ದರ್ಶನ ಪಡೆಯಲು ಅನುಕೂಲವಾಗಿದೆ. ಭಕ್ತರು ಸರತಿ ಸಾಲಿನಲ್ಲಿ ಕಾಯುವ ಬದಲು ವೇಗವಾಗಿ ದರ್ಶನ ಮುಗಿಸಿ ಪುನೀತರಾಗುತ್ತಿದ್ದಾರೆ. ಇನ್ನುಳಿದ ಐದಾರು ದಿನಗಳಲ್ಲಿ ಮತ್ತೆ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More