ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಲಗೈ ಮೇಲೆ ಗೂಳಿಯ ಹಚ್ಚೆಯಿರೋದು ನಿಮಗೆ ಗೊತ್ತಾ?

|

Updated on: Sep 02, 2024 | 12:16 PM

ಗೂಳಿ ಶಕ್ತಿಯನ್ನು ಬಿಂಬಿಸುತ್ತದೆ. ಶಿವಕುಮಾರ್ ಅದರ ಹಚ್ಚೆ ಹಾಕಿಸಿಕೊಂಡಿದ್ದು ಯಾವಾಗ ಅಂತ ಅವರೇ ಯಾವತ್ತಾದರೂ ಹೇಳಬೇಕು. ಹಚ್ಚೆ ಹಾಕಿಸಿಕೊಳ್ಳುವ ಹಿಂದೆ ಒಂದು ಉದ್ದೇಶ ಅಡಗಿರುತ್ತದೆ ಅಂತ ಹಿರಿಯರು ಹೇಳುತ್ತಿರುತ್ತಾರೆ. ಶಿವಕುಮಾರ್ ಯಾವ ಕಾರಣಕ್ಕೆ ಹಾಕಿಸಿಕೊಂಡಿದ್ದಾರೋ?

ರಾಮನಗರ: ನಮ್ಮ ದೇಶದಲ್ಲಿ ರಾಜ್ಯದಲ್ಲಿ ಹಚ್ಚೆ ಹಾಕಿಸಿಕೊಳ್ಳುವುದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ. ಗ್ರಾಮೀಣ ಭಾಗದಲ್ಲಿ ಅದು ಹೆಚ್ಚು ಪ್ರಚಲಿತ. ಹೊಸಪೀಳಿಗೆ ನಗರವಾಸಿಗಳು ಅದನ್ನು ಟ್ಯಾಟೂ ಎಂಬ ಆಧುನಿಕ ಹೆಸರಿನಿಂದ ಹಾಕಿಸಿಕೊಳ್ಳುತ್ತಾರೆ. ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಬಲಗೈ ಮೇಲೆ ಗೂಳಿಯ ಹಚ್ಚೆ ಹಾಕಿಸಿಕೊಂಡಿದ್ದಾರೆ. ಮಾಧ್ಯಮದ ಕೆಮೆರಾ ಕಣ್ಣುಗಳಿಗೆ ಅದು ಇದುವರೆಗೆ ಬಿದ್ದಿರಲಿಲ್ಲ, ಇವತ್ತು ಅವರು ರಾಮನಗರದಲ್ಲಿ ಅರ್ಜಿಗಳ ಮೇಲೆ ಸಹಿ ಮಾಡುತ್ತಿದ್ದಾಗ ಕಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಡಿಕೆ ಶಿವಕುಮಾರ್ ​ಲಕ್ಕಿ ಬೈಕ್‌ಗೆ ಹೊಸ ರೂಪ, ಆ ದಿನಗಳನ್ನು ಮೆಲುಕು ಹಾಕಿದ ಡಿಸಿಎಂ