ಸ್ಟಿಂಗ್ ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು: ಹೆಚ್​ಡಿ ಕುಮಾರಸ್ವಾಮಿ ಆರೋಪ

Edited By:

Updated on: Oct 17, 2026 | 12:56 PM

ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸ್ಟಿಂಗ್ ಕಾರ್ಯಾಚರಣೆಗಳ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪಕ್ಷದ ಮುಖಂಡರ ಸಭೆ ಕರೆದಿದ್ದಾರೆ. ಈ ಕಾರ್ಯಾಚರಣೆಗಳು ಪತ್ರಿಕೋದ್ಯಮಕ್ಕೆ ಕಳಂಕ ತರುತ್ತಿವೆ ಹಾಗೂ ಸರ್ಕಾರವನ್ನು ಪ್ರಶ್ನಿಸುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಪಕ್ಷದ ಹಿತಾಸಕ್ತಿ ಮತ್ತು ಜನರ ಕಲ್ಯಾಣಕ್ಕಾಗಿ ಕಾನೂನಾತ್ಮಕ ಮತ್ತು ಜಾಗೃತಿ ಹೋರಾಟದ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 17: ಒಂದು ಸ್ಟಿಂಗ್ ಆಪರೇಷನ್ ಘಟನೆ 2011ರಲ್ಲಿ ನಡೆದಿದೆ ಎಂದು ಮೊದಲು ಭಾವಿಸಲಾಗಿತ್ತು, ಆದರೆ ಇತ್ತೀಚಿನ ವರದಿಯ ಪ್ರಕಾರ ಅದು 2023ರಲ್ಲಿ ನಡೆದಿದೆ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದು, ಆ ವಿಡಿಯೋ ಇಟ್ಟುಕೊಂಡು ಎಲ್ಲರನ್ನೂ ಕೈಗೊಂಬೆ ಮಾಡಿಕೊಂಡಿರಬೇಕು ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಡಿಕೆ ಶಿವಕುಮಾರ್ ಭೇಟಿಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಕೆಲವು ವಿಷಯಗಳ ಬಗ್ಗೆ ದೂರು ನೀಡಿರುವುದಾಗಿ ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.

ಮತ್ತೊಂದೆಡೆ, ಸ್ಟಿಂಗ್ ಆಪರೇಷನ್ ಪ್ರಮುಖ ಸೂತ್ರಧಾರನ ವಿರುದ್ಧ ಕ್ರಮಕ್ಕೆ ಪೊಲೀಸ್ ಆಯುಕ್ತರಿಗೆ ನೀಡಿದ್ದ 2 ದಿನಗಳ ಗಡುವು ಅಂತ್ಯಗೊಂಡ ಬಗ್ಗೆ ಪ್ರತಿಕ್ರಿಯಿಸಿ, ಮುಂದಿನ ಹೋರಾಟದ ಕುರಿತು ಪಕ್ಷದ ವತಿಯಿಂದ ಮಹತ್ವದ ನಿರ್ಧಾರ ಕೈಗೊಳ್ಳಲು ಪಕ್ಷದ ಮುಖಂಡರ ಸಭೆ ಕರೆದಿರುವುದಾಗಿ ಹೇಳಿದ್ದಾರೆ. ತಮ್ಮ ಈ ನಿಲುವು ಯಾವುದೇ ವೈಯಕ್ತಿಕ ದ್ವೇಷಕ್ಕೆ ಅಲ್ಲ, ಬದಲಾಗಿ ಪಕ್ಷದ ಜವಾಬ್ದಾರಿ ಹಾಗೂ ನಾಡಿನ ಜನತೆಯ ಹಿತದೃಷ್ಟಿಯಿಂದ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಸ್ಟಿಂಗ್ ಕಾರ್ಯಾಚರಣೆಗಳು ಗೌರವಕ್ಕೆ ಧಕ್ಕೆ ತರುತ್ತಿವೆ ಹಾಗೂ ಮಾಧ್ಯಮಗಳ ಹೆಸರನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಪತ್ರಿಕೋದ್ಯಮಕ್ಕೆ ಕಳಂಕ ತರುತ್ತಿರುವ ಇಂತಹ ನಡವಳಿಕೆಗಳಿಗೆ ರಾಜ್ಯದಲ್ಲಿ ಸಂಪೂರ್ಣ ತೆರೆ ಎಳೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುನಿಲ್​ ಎಮ್​ ಹೆಚ್​