ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಹೆಚ್​ಡಿ ಕುಮಾರಸ್ವಾಮಿ

Edited By:

Updated on: Oct 10, 2026 | 8:51 PM

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಬಳಿಯಿರುವ ಪೆನ್‌ಡ್ರೈವ್ ಕುರಿತು ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಹಾಲಿ ಮುಖ್ಯಮಂತ್ರಿಗಳು ನೀರಾವರಿ ಸಚಿವರಾಗಿದ್ದಾಗ ಇಂಜಿನಿಯರ್‌ಗಳ ವರ್ಗಾವಣೆ ಕುರಿತು ನಡೆದಿದೆ ಎನ್ನಲಾದ ಭ್ರಷ್ಟಾಚಾರದ ದಾಖಲೆಗಳು ಪೆನ್‌ಡ್ರೈವ್‌ನಲ್ಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ. ವಿಡಿಯೋ ನೋಡಿ.

ಹಾಸನ, ಅಕ್ಟೋಬರ್​​ 10: ‘ಸಿಎಂಗೆ ಸ್ಟಿಂಗ್ ಆಪರೇಷನ್ ಚಿಂತೆ. ಐದು ಜನ ಅಂತಾ ಗೊತ್ತಿದೆ ಅಂದ ಮೇಲೆ ಅರೆಸ್ಟ್ ಮಾಡಬೇಕಲ್ವೇ?’ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಾನು ಕಾಣದೆ ಇರೋ ಪೆನ್‌ಡ್ರೈವಾ, ನನ್ನ ಸ್ಟೈಲ್ ಮಾಡಲು ಆಗಲ್ಲ ಬಿಡಿ. ಅದೇನೋ ಕೇಂದ್ರ ಮಂತ್ರಿ ಅದು ಇದು ಅಂದಿದ್ದಾರೆ’ ಎಂದು ಮಂಡ್ಯ ಶಾಸಕ ಗಣಿಗ ರವಿ ವಿರುದ್ಧ ಕಿಡಿಕಾರಿದರು. ಇನ್ನು ತಮ್ಮ ಬಳಿಯಿರುವ ಪೆನ್​ಡ್ರೈವ್ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ರಚನೆಯಾದ ಆರಂಭದಲ್ಲಿ ನೀರಾವರಿ ಇಲಾಖೆಯ ಎಂಜಿನಿಯರ್​​ಗಳ ವರ್ಗಾವಣೆಗಾಗಿ ಹಣ ವಸೂಲಿ ಮಾಡಿರುವ ಬಗ್ಗೆ ಹಾಗೂ ನಿವೃತ್ತಿಗೆ ಕೆಲವೇ ತಿಂಗಳುಗಳಿರುವ ಅಧಿಕಾರಿಯೊಬ್ಬರು ಸಾಲ ಮಾಡಿ ಹಣ ನೀಡಲು ನಿರಾಕರಿಸಿದ ಕುರಿತು ಚರ್ಚೆ ನಡೆದಿತ್ತು’ ಎಂದು ಮಾಹಿತಿ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More