ಬೆಂಗಳೂರಿನಲ್ಲಿ ದಿನಕ್ಕೆ ಎಷ್ಟು HMT ವಾಚ್​ ತಯಾರಾಗುತ್ತೆ ಗೊತ್ತಾ? ಮಾಹಿತಿ ನೀಡಿದ ಕುಮಾರಸ್ವಾಮಿ

Updated on: Jul 06, 2026 | 3:20 PM

ಬೆಂಗಳೂರಿನಲ್ಲಿರುವ ಹೆಚ್​​​ಎಂಟಿ ಕಾರ್ಖಾನೆ ಬಗ್ಗೆ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹೆಚ್ ಎಂ ಟಿ ಜಮೀನಿನಲ್ಲಿ ರಿಯಲ್ ಎಸ್ಟೇಟ್ ಮಾಡೋಕೆ ಹೊರಟಿದ್ದಿರಾ? ನಾನು ಆಕಸ್ಮಿಕವಾಗಿ ಕೇಂದ್ರದಲ್ಲಿ ಕೈಗಾರಿಕೆ ಸಚಿವನಾಗಿದ್ದೇನೆ. ನನ್ನ‌ಕರ್ತವ್ಯ ನಿರ್ವಹಿಸುತ್ತೇನೆ. ನಾನು ಮಂತ್ರಿ ಆದ ಬಳಿಕ ಹೆಚ್ ಎಂಟಿ‌ದು ಶುರು ಮಾಡಿದ್ದಾರೆ. ಹೇಗೆ ನಾಶ ಮಾಡಬೇಕಂತ ಹೊರಟಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, (ಜುಲೈ 06): ಬೆಂಗಳೂರಿನಲ್ಲಿರುವ ಹೆಚ್​​​ಎಂಟಿ ಕಾರ್ಖಾನೆ ಬಗ್ಗೆ ಕೇಂದ್ರ ಸಚಿವ ಎಚ್​​ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಹೆಚ್ ಎಂ ಟಿ ಜಮೀನಿನಲ್ಲಿ ರಿಯಲ್ ಎಸ್ಟೇಟ್ ಮಾಡೋಕೆ ಹೊರಟಿದ್ದಿರಾ? ನಾನು ಆಕಸ್ಮಿಕವಾಗಿ ಕೇಂದ್ರದಲ್ಲಿ ಕೈಗಾರಿಕೆ ಸಚಿವನಾಗಿದ್ದೇನೆ. ನನ್ನ‌ಕರ್ತವ್ಯ ನಿರ್ವಹಿಸುತ್ತೇನೆ. ನಾನು ಮಂತ್ರಿ ಆದ ಬಳಿಕ ಹೆಚ್ ಎಂಟಿ‌ದು ಶುರು ಮಾಡಿದ್ದಾರೆ. ಹೇಗೆ ನಾಶ ಮಾಡಬೇಕಂತ ಹೊರಟಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸರ್ಕಾರಿ ಸೌಮ್ಯದ ಕಾರ್ಖಾನೆಗಳು ಉಳಿಯಬಾರದು ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ . ಎಂಎಸ್ ಐ ಎಲ್ ಹಣೆ ಬರಹ ಏನಾಗಿದೆ. ಈ ಕಾರ್ಖಾನೆ ಪುನಶ್ಚೇತನ ಗೊಳಿಸಬೇಕಂತ ನಿರ್ಧಾರ ಮಾಡಿದ್ದೆ.ಹಿಂದೆ ‌ಇದ್ದ ಅರಣ್ಯ ಸಚಿವರು ಸೇರಿದಂತೆ ಸರ್ಕಾರ ಅತಿಕ್ರಮಣ ಮಾಡ್ತಿದೆ. ಹೆಚ್ ಎಂಟಿ ಸಾವಿರಾರು ಕುಟುಂಬಗಳಿಗೆ ಶಕ್ತಿ ತುಂಬಿದೆ. ಹೈದ್ರಾಬಾದ್ ನಲ್ಲಿ 1500 ಎಕರೆ ಜಮೀನಿದೆ. ಲಾಭಾಂಶದಲ್ಲಿ ಸರ್ಕಾರದ ನೆರವು ದೊಡ್ಡಮಟ್ಟದಲ್ಲಿ ದೊರೆಯದಿದ್ರು ಬೆಂಗಳೂರಿನಲ್ಲಿ ಆದ ಉತ್ಪಾದನೆಯಿಂದ ಹೊರ ರಾಜ್ಯಗಳಲ್ಲಿ ಆಸರೆಯಾಗಿತ್ತು.ಹೆಚ್ ಎಂಟಿ ವಾಚ್ ಗೆ ಅಷ್ಟೆ ಅಲ್ಲಾ ಪ್ರಾಮುಖ್ಯತೆ ಕೊಡುವುದು, ಮೆಷಿನ್ ಗಳಿಗೂ ಕೊಡಬೇಕು. ರಷ್ಯಾದವರು ನಮ್ಮ ಜೊತೆ ಕೈಜೋಡಿಸೋಕೆ ಮುಂದಾಗಿದ್ದಾರೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 06, 2026 03:14 PM
Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More