ಪ್ರಜ್ವಲ್​​ ಸೋಲಿನ ನೋವಲ್ಲೇ ದೇವೇಗೌಡ ಭೇಟಿಗೆ ಬಂದ ರೇವಣ್ಣ

|

Updated on: Jun 04, 2024 | 5:10 PM

ಬಹುದಿನಗಳಿಂದ ಕಾದಿದ್ದ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದ್ದು, ಹಾಸನ ಲೋಕಸಭಾ ಕ್ಷೇತ್ರದ (Hassan Lok Sabha Constituency) ಫಲಿತಾಂಶ ಪ್ರಕಟವಾಗಿದ್ದು, ಮಾಜಿ ಪ್ರಧಾನಿ H.D. ದೇವೇಗೌಡರ ಮೊಮ್ಮಗ, ಪ್ರಜ್ವಲ್ ರೇವಣ್ಣ (Prajwal Revanna) ಅವರು, ಕಾಂಗ್ರೆಸ್​ನ ಶ್ರೇಯಸ್ ಪಾಟೇಲ್​ (Shreyas Patel) ವಿರುದ್ದ ಸೋಲು ಕಂಡಿದ್ದಾರೆ. ಈ ವಿಷಯ ತಿಳಿಯುತ್ತಲ್ಲೇ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್​.ಡಿ.ದೇವೇಗೌಡರ ನಿವಾಸಕ್ಕೆ ರೇವಣ್ಣ ಆಗಮಿಸಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದ (Hassan Lok Sabha Constituency) ಫಲಿತಾಂಶ ಪ್ರಕಟವಾಗಿದ್ದು, ಮಾಜಿ ಪ್ರಧಾನಿ H.D. ದೇವೇಗೌಡರ ಮೊಮ್ಮಗ, ಪ್ರಜ್ವಲ್ ರೇವಣ್ಣ (Prajwal Revanna) ಅವರು, ಕಾಂಗ್ರೆಸ್​ನ ಶ್ರೇಯಸ್ ಪಾಟೇಲ್​ (Shreyas Patel) ವಿರುದ್ದ ಸೋಲು ಕಂಡಿದ್ದಾರೆ. ಈ ವಿಷಯ ತಿಳಿಯುತ್ತಲ್ಲೇ ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್​.ಡಿ.ದೇವೇಗೌಡರ ನಿವಾಸಕ್ಕೆ ರೇವಣ್ಣ ಆಗಮಿಸಿದ್ದಾರೆ. ಇನ್ನು ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಹಾಸನದಲ್ಲಿ ಪ್ರಜ್ವಲ್ ರೇವಣ್ಣನೇ ಗೆಲ್ಲಬಹುದು ಎನ್ನಲಾಗಿತ್ತು. ಆದರೆ, ಈ ಪೆನ್​ಡ್ರೈವ್ ಸಂಬಂಧಿತ ಪ್ರಕರಣಗಳಿಂದ ಕಾಂಗ್ರೆಸ್​ ಸಹ ತಮ್ಮ ಗೆಲುವಿನ ಕ್ಷೇತ್ರಗಳಲ್ಲಿ ಹಾಸನವೊಂದನ್ನೂ ಸಹ ಇಟ್ಟುಕೊಂಡಿತ್ತು. ಜೆಡಿಎಸ್​ ಬಿಜೆಪಿ ಮೈತ್ರಿ ಅಭ್ಯರ್ಥಿ ವಿರುದ್ಧ ಆಡಳಿತ ವಿರೋಧಿ ಅಲೆ, ಪೆನ್​ಡ್ರೈವ್​, ಕುಟುಂಬ ರಾಜಕಾರಣದಿಂದ ಕ್ಷೇತ್ರದ ಜನ ಬೇಸತ್ತು ಈ ಬಾರಿ ಕಾಂಗ್ರೆಸ್​ನ ಶ್ರೇಯಸ್ ಪಾಟೀಲ್​ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಕಾಂಗ್ರೆಸ್ ನಾಯಕರಲ್ಲಿದ್ದು, ಅದರಂತೆ ಶ್ರೇಯಸ್​ ಭರ್ಜರಿ ಗೆಲುವು ಸಾಧಿಸಿದ್ದಾರೆ.

ರಾಜ್ಯದ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on