ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರತಿನಿತ್ಯ ಭಕ್ತ ಸಾಗರ: ವಸತಿಗೂ ಪರದಾಟ

Edited By:

Updated on: Jun 14, 2026 | 9:18 AM

ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ವಸತಿಗೃಹಗಳು ಪ್ರತಿನಿತ್ಯ ಭರ್ತಿಯಾಗುತ್ತಿವೆ. ಮಠದಿಂದ ಭಕ್ತರಿಗಾಗಿ ಕಲ್ಯಾಣ ಮಂಟಪಗಳಲ್ಲಿ ಮಾಡಿರುವ ವ್ಯವಸ್ಥೆಯೂ ಸಾಲದಂತಾಗಿದೆ ಹೀಗಾಗಿ ವಸತಿ ಸಿಗದೆ ವೃದ್ಧರು ಮಕ್ಕಳೆನ್ನದೆ ಭಕ್ತರು ಮಠದ ಪ್ರಾಂಗಣದಲ್ಲೇ ಮಲಗುತ್ತಿದ್ದರೆ, ಇತ್ತ ಖಾಸಗಿ ಲಾಡ್ಜ್‌ಗಳ ಮಾಲೀಕರು ಸುಲಿಗೆಗೆ ಇಳಿದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ರಾಯಚೂರು, ಜೂನ್​​ 14: ಮಳೆಯ ನಡುವೆಯೂ ಮಂತ್ರಾಲಯಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿರುವ ಪರಿಣಾಮ, ಸುತ್ತಮುತ್ತಲಿನ ವಸತಿಗೃಹಗಳ ಸುಮಾರು 3 ಸಾವಿರ ರೂಮ್​​ಗಳು ಫುಲ್​​ ಆಗುತ್ತಿವೆ. ಹೀಗಾಗಿ ಕನಿಷ್ಠ ವಸತಿಗೂ ಭಕ್ತರು ಪರದಾಡಬೇಕಾದ ಸ್ಥಿತಿ ಇದ್ದು, ಮಠದಿಂದ ಭಕ್ತರಿಗಾಗಿ ಕಲ್ಯಾಣ ಮಂಟಪಗಳಲ್ಲಿ ಮಾಡಿರುವ ವ್ಯವಸ್ಥೆಯೂ ಸಾಲದಂತಾಗಿದೆ. ಹೀಗಾಗಿ ಮಠದ ಪ್ರಾಂಗಣದಲ್ಲೇ ಭಕ್ತರು ಮಲಗುತ್ತಿರುವ ದೃಶ್ಯ ಕಂಡುಬಂದಿದೆ. ಮತ್ತೊಂದೆಡೆ ಖಾಸಗಿ ವಸತಿ ಗೃಹಗಳ ಮಾಲೀಕರು ಇದನ್ನೇ ಬಂಡವಾಳ ಮಾಡಿಕೊಂಡಿದ್ದು, ಭಕ್ತರ ಸುಲಿಗೆಗೆ ಇಳಿದಿರುವ ಬಗ್ಗೆಯೂ ಆಕ್ರೋಶ ವ್ಯಕ್ತವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Jun 14, 2026 09:17 AM
Follow Us
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More