‘ಲಕ್ಕಿ ಮ್ಯಾನ್’ ಶೂಟಿಂಗ್ ವೇಳೆ ಅಪ್ಪು ಕ್ಯಾರವಾನ್ಗೆ ಹೋಗ್ತಿರಲಿಲ್ಲ; ಕಾರಣ ತಿಳಿಸಿದ ನಿರ್ದೇಶಕ
‘ಲಕ್ಕಿ ಮ್ಯಾನ್’ ಸಿನಿಮಾ ಸೆಪ್ಟೆಂಬರ್ 9ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರು ಅತಿಥಿ ಪಾತ್ರ ಮಾಡಿದ್ದಾರೆ.
‘ಲಕ್ಕಿ ಮ್ಯಾನ್’ ಸಿನಿಮಾ (Lucky Man Movie) ಸೆಪ್ಟೆಂಬರ್ 9ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪುನೀತ್ ರಾಜ್ಕುಮಾರ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರದ್ದು ದೇವರ ಪಾತ್ರ ಅನ್ನೋದು ವಿಶೇಷ. ಈ ಚಿತ್ರಕ್ಕೆ ಪ್ರಭುದೇವ ಅವರ ಸಹೋದರ ಎಸ್. ನಾಗೇಂದ್ರ ಪ್ರಸಾದ್ ಅವರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನ. ಸಿನಿಮಾ ಶೂಟಿಂಗ್ ವೇಳೆ ಪುನೀತ್ ಏನು ಮಾಡುತ್ತಿದ್ದರು ಎಂಬ ವಿಚಾರದ ಬಗ್ಗೆ ನಿರ್ದೇಶಕ ಎಸ್. ನಾಗೇಂದ್ರ ಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.