ಸಮಾವೇಶಕ್ಕೆ ತಡವಾಗಿ ಆಗಮಿಸಿದಕ್ಕೆ ಜನಸಮೂಹದ ಕ್ಷಮೆ ಯಾಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಸಮಾವೇಶಕ್ಕೆ ತಡವಾಗಿ ಆಗಮಿಸಿದಕ್ಕೆ ಜನಸಮೂಹದ ಕ್ಷಮೆ ಯಾಚಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 02, 2024 | 3:16 PM

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದೆಡೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಒಕ್ಕೂಟ ಇದ್ದರೆ ಮತ್ತೊಂದೆಡೆ ಭ್ರಷ್ಟಾಚಾರಿಗಳೆಲ್ಲ ಸೇರಿ ಮಾಡಿಕೊಂಡಿರುವ ಇಂಡಿ ಅಲಯನ್ಸ್ ಮೈತ್ರಿಕೂಟವಿದೆ ಆದರೆ ದೇಶದೆಲ್ಲೆಡೆ ಮೋದಿಯವರ ಅಲೆ ಇದೆ ಎಂದು ಅಮಿತ್ ಶಾ ಹೇಳಿದರು.

ಬೆಂಗಳೂರು: ಬೆಂಗಳೂರು ಅರಮನೆ ಮೈದಾನದಲ್ಲಿ ಇಂದು ಆಯೋಜಿಲಾಗಿದ್ದ ಬೃಹತ್ ಸಮಾವೇಶದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ತಮ್ಮ ಮಾತು ಆರಂಭಿಸುವ ಮೊದಲು ತಡವಾಗಿ ಬಂದ ಕಾರಣಕ್ಕೆ ನೆರೆದ ಜನಸಮೂಹದ ಕ್ಷಮೆ (apologized) ಯಾಚಿಸಿದರು. ಬೆಳಗ್ಗೆಯಿಂದ ಹಲವಾರು ಸಭೆಗಳಲ್ಲಿ ಭಾಗವಹಿಸಿಸಬೇಕಾದ ಅನಿವಾರ್ಯತೆಯ ಕಾರಣ ಸಮಾವೇಶಕ್ಕೆ ಬರೋದು ತಡವಾಯಿತು ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಮತ್ತು ತಾಳ್ಮೆಯಿಂದ ಕಾಯ್ದ ನಿಮಗೆ ಧನ್ಯವಾ ಸಲ್ಲಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಒಂದೆಡೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಎನ್ ಡಿ ಎ ಒಕ್ಕೂಟ ಇದ್ದರೆ ಮತ್ತೊಂದೆಡೆ ಭ್ರಷ್ಟಾಚಾರಿಗಳೆಲ್ಲ ಸೇರಿ ಮಾಡಿಕೊಂಡಿರುವ ಇಂಡಿ ಅಲಯನ್ಸ್ ಮೈತ್ರಿಕೂಟವಿದೆ. ದೇಶದೆಲ್ಲೆಡೆ ಮೋದಿಯವರ ಅಲೆ ಇದೆ, ತಾನು ಭೇಟಿ ಎಲ್ಲ ನಗರ ಪ್ರದೇಶ, ಗ್ರಾಮೀಣ ಪ್ರದೇಶ, ಹೋಬಳಿ ಎಲ್ಲ ಕಡೆ ಎಲ್ಲ ವರ್ಗದ ಜನ ಕೇವಲ ಮೋದಿ ಮೋದಿ ಅನ್ನುತ್ತಿದ್ದಾರೆ ಎಂದು ಅಮಿತ್ ಶಾ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಜೆಪಿ ಸಮಾವೇಶದಲ್ಲಿ ಅಮಿತ್ ಶಾ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಯುವ ಬಿಜೆಪಿ ನಾಯಕ ತೇಜಸ್ವೀ ಸೂರ್ಯ