Loading video

ಹನಿ ಟ್ರ್ಯಾಪ್ ಪ್ರಕರಣ ಹಿಟ್ ಅಂಡ್ ರನ್ ಆಗಬಾರದು, ಟಾರ್ಗೆಟ್ ಆಗಿರುವವರು ದೂರು ಸಲ್ಲಿಸಲಿ: ಡಿಕೆ ಶಿವಕುಮಾರ್

|

Updated on: Mar 21, 2025 | 10:24 AM

ನಿನ್ನೆ ಸದನದಲ್ಲಿ ಹನಿ ಟ್ರ್ಯಾಪ್ ವಿಷಯ ಚರ್ಚೆಯಾತ್ತಿದ್ದಾಗ ಮುನಿರತ್ನ 5-ವರ್ಷದ ಹಿಂದೆ ತನ್ನನ್ನು ಸುಳ್ಳು ಅತ್ಯಾಚಾರದ ಪ್ರಕರಣನದಲ್ಲಿ ಸಿಕ್ಕಿಸಲಾಗಿತ್ತು ಎಂದು ಆವೇಶದಲ್ಲಿ ಕೂಗಾಡಿದ್ದರು. ನೀವು ಹೇಳುತ್ತಿರುವ ಪ್ರಕರಣ ನ್ಯಾಯಾಲಯದಲ್ಲಿದೆ ಅಂತ ಸ್ಪೀಕರ್ ಯುಟಿ ಖಾದರ್​ ಮತ್ತು ಬೇರೆ ಸದಸ್ಯರು ಹೇಳಿದರೂ ಮುನಿರತ್ನ ಪಟ್ಟುಹಿಡಿದವರವರ ಹಾಗೆ ಸದನದಲ್ಲಿ ಮಾತಾಡಿದ್ದರು.

ಬೆಂಗಳೂರು, 21 ಮಾರ್ಚ್: ನಿನ್ನೆ ಆರ್ ಆರ್ ನಗರ ಶಾಸಕ ಮುನಿರತ್ನ ನಾಯ್ಡು (Munirathna Naidu) ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಹನಿ ಟ್ರ್ಯಾಪ್ ಗೆ ಸಂಬಂಧಿಸಿದಂತೆ ಹಲವು ಆರೋಪಗಳನ್ನು ಮಾಡಿದರು. ಅವರ ಆರೋಪಗಳ ಬಗ್ಗೆ ಇವತ್ತು ಶಿವಕುಮಾರ್ ಅವರನ್ನು ಕೇಳಿದಾಗ, ಇದ್ಯಾವದೂ ಹಿಟ್ ಅಂಡ್ ರನ್ ಪ್ರಕರಣ ಆಗಬಾರದು, ಯಾರನ್ನು ಟಾರ್ಗೆಟ್ ಮಾಡಲಾಗಿದೆಯೋ ಅವರು ಮೊದಲು ಹೋಗಿ ಪೊಲೀಸ್ ಸ್ಟೇಷನ್​​ನಲ್ಲಿ ದೂರು ಸಲ್ಲಿಸಲಿ, ಅವರು ತಪ್ಪಿತಸ್ಥರನ್ನು ಪತ್ತೆಮಾಡಿ ಶಿಕ್ಷೆಗೊಳಪಡಿಸುತ್ತಾರೆ ಎಂದು ಹೇಳಿದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಹನಿಟ್ರ್ಯಾಪ್​ ಕೇಸ್: ಡಿಕೆ ಶಿವಕುಮಾರ್ ವಿರುದ್ಧ ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ