Horoscope Today: ಇಂದು ನವರಾತ್ರಿಯ ಮೂರನೇ ದಿನ; ಚಂದ್ರಘಂಟಾ ದೇವಿಯ ಆರಾಧನೆಯಿಂದ ಕಾರ್ಯಸಿದ್ಧಿ
ಅಕ್ಟೋಬರ್ 13, ಮಂಗಳವಾರದ ದಿನ ಭವಿಷ್ಯದಲ್ಲಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲವನ್ನು ವಿವರಿಸಿದ್ದಾರೆ. ಆರ್ಥಿಕ ಸ್ಥಿತಿ, ಆರೋಗ್ಯ, ವೃತ್ತಿಜೀವನ, ಕೌಟುಂಬಿಕ ಸಂಬಂಧಗಳು, ಪ್ರಯಾಣ ಮತ್ತು ಇತರ ಪ್ರಮುಖ ಅಂಶಗಳ ಕುರಿತು ಜ್ಯೋತಿಷ್ಯ ಸಲಹೆಗಳನ್ನು ನೀಡಲಾಗಿದೆ. ಪ್ರತಿಯೊಂದು ರಾಶಿಗೂ ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಅಕ್ಟೋಬರ್ 13, ಮಂಗಳವಾರದ ದ್ವಾದಶ ರಾಶಿ ಫಲಾಫಲಗಳನ್ನು ತಿಳಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಆಶ್ವೀಜ ಮಾಸ, ಶುಕ್ಲ ಪಕ್ಷದ ತದಿಗೆ ತಿಥಿ ಇಂದಿನ ವಿಶೇಷವಾಗಿದೆ. ಈ ದಿನ ಮಧ್ಯಾಹ್ನ 3 ಗಂಟೆ 3 ನಿಮಿಷದಿಂದ 4 ಗಂಟೆ 32 ನಿಮಿಷದ ತನಕ ರಾಹುಕಾಲ ಇರುತ್ತದೆ. ಹಾಗೆಯೇ, 12 ಗಂಟೆ 5 ನಿಮಿಷದಿಂದ 1 ಗಂಟೆ 36 ನಿಮಿಷದ ತನಕ ಶುಭ ಸಂಕಲ್ಪ ಕಾಲವಿರುತ್ತದೆ.
ಇದು ನವರಾತ್ರಿಯ ಪರ್ವಕಾಲದ ಮೂರನೇ ದಿನವಾಗಿದ್ದು, ಚಂದ್ರಘಂಟಾ ದೇವಿಯ ಆರಾಧನೆಗೆ ಮೀಸಲಾಗಿದೆ. ಈ ತಾಯಿಯನ್ನು ಪೂಜಿಸುವುದರಿಂದ ಧೈರ್ಯ, ಕಾರ್ಯಸಿದ್ಧಿ, ಮನಃಶಾಂತಿ ಮತ್ತು ನಕಾರಾತ್ಮಕ ಶಕ್ತಿಗಳ ನಿವಾರಣೆ ಸಾಧ್ಯವಾಗುತ್ತದೆ. ತೆಂಗಿನ ಅನ್ನ, ಪಾಯಸವನ್ನು ನೈವೇದ್ಯವಾಗಿ ಅರ್ಪಿಸಬಹುದು. “ಓಂ ಚಂದ್ರಘಂಟಾ ದೇವ್ಯೈ ನಮಃ” ಎಂಬ ಮಂತ್ರ ಜಪಿಸುವುದು ಶುಭಕರ ಎಂದು ಗುರೂಜಿ ಹೇಳಿದ್ದಾರೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

