ವಿದ್ಯುತ್ ಬಿಲ್ ವಸೂಲಿಗೆ ಬಂದಿದ್ದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ
ವಿದ್ಯುತ್ ಬಿಲ್ ವಸೂಲಿಗೆ ಬಂದಿದ್ದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿ ನಡೆದಿದೆ.
ಬಾಗಲಕೋಟೆ; ವಿದ್ಯುತ್ ಬಿಲ್ ವಸೂಲಿಗೆ ಬಂದಿದ್ದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ ನಡೆಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿ ನಡೆದಿದೆ. ನವನಗರದ ಸೆಕ್ಟರ್ ನಂ.45ರಲ್ಲಿ ಕರೆಂಟ್ ಬಿಲ್ ಬಾಕಿ ವಸೂಲಿಗೆ ಹೋಗಿದ್ದ ಬಿಲ್ ಕಲೆಕ್ಟರ್, ಲೈನ್ ಮನ್ ಬಿಲ್ ಕಟ್ಟುವಂತೆ ಕೇಳಿದ್ದಾರೆ. ಇಲ್ಲದಿದ್ದರೆ, ಲೈನ್ ಕಟ್ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ವೇಳೆ ಲೈನ್ಮೆನ್ ಮೇಲೆ ಸೈಯದ್ ಅಲಿಯ ಪತ್ನಿ ಹಾಗೂ ಮಗ ಹಲ್ಲೆ ನಡೆಸಿ, ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಈ ಬಗ್ಗೆ ಹೆಸ್ಕಾಮ್ ಸಿಬ್ಬಂದಿ ನವನಗರ ಠಾಣೆಗೆ ದೂರು ನೀಡಿದ್ದಾರೆ.
Published on: Nov 29, 2022 07:12 PM
Latest Videos