Loading video

Bengaluru Stampede; ನನ್ನ ಕಣ್ಣೀರು ಬಗ್ಗೆ ಯಾಕೆ ಚರ್ಚೆ? ಬೇರೆಯವರು ಕಣ್ಣೀರು ಹಾಕಿದ್ದೇನಾಯಿತು? ಶಿವಕುಮಾರ್

Updated on: Jun 06, 2025 | 6:28 PM

ತಾನು ಬೆಂಗಳೂರು ನಗರ ಉಸ್ತುವಾರಿ ಸಚಿವನಾಗಿರುವುದರಿಂದ ಕೆಎಸ್​ಸಿಎ ಅಧಿಕಾರಿಗಳು ಫೋನ್ ಮಾಡಿದ್ದರು, ಆಟಗಾರರು ಅಹ್ಮದಾಬಾದ್​ನಿಂದ ಬಂದಾಗ ಅವರನ್ನು ರಿಸೀವ್ ಮಾಡಿಕೊಳ್ಳಲು ಹೋಗಿ ಕನ್ನಡದ ಧ್ವಜ ನೀಡಿದೆ ಮತ್ತು ವಿಕ್ಟರಿ ಪರೇಡ್​ಗೆ ಅನುಮತಿಯಿಲ್ಲದ ಕಾರಣ ಸಹಕರಿಸಬೇಕೆಂದು ಹೇಳಿದೆ, ಗಲಾಟೆಯಾಗುತ್ತಿರುವ ವಿಷಯ ಗೊತ್ತಾದಾಗ ಸ್ಟೇಡಿಯಂಗೆ ಹೋಗಿ ಹತ್ತು ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸಲು ಹೇಳಿದೆ, ಇದರಲ್ಲಿ ತಪ್ಪೇನಿದೆ ಎಂದು ಶಿವಕುಮಾರ್ ಪ್ರಶ್ನಿಸಿದರು.

ಬೆಂಗಳೂರು, ಜೂನ್ 6: ಕಾಲ್ತುಳಿತಕ್ಕೊಳಗಾಗಿ ಸತ್ತವರ ನೆನೆದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದು ಚರ್ಚೆಯ ವಿಷಯವಾಗಿದೆ ಮತ್ತು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅದನ್ನು ಡ್ರಾಮಾ ಎಂದಿದ್ದಾರೆ. ಮಾಧ್ಯಮದವರೊಂದಿಗೆ ಮಾತಾಡಿದ ಶಿವಕುಮಾರ್, ತಾನು ಕಣ್ಣೀರು ಹಾಕಿದ್ದನ್ನು ಅಪಹಾಸ್ಯ ಮಾಡಲಾಗುತ್ತಿದೆ, ಅವರು ಸಾರ್ವಜನಿಕವಾಗಿ ಕಣ್ಣೀರು ಹಾಕಿದ್ದೇನಾಯಿತು? ಚುನಾವಣಾ ಸಮಯದಲ್ಲಿ ಯಾರು ಎಲ್ಲೆಲ್ಲಿ ಕಣ್ಣೀರು ಹಾಕಿದ್ದಾರೆ ಅಂತ ಎಲ್ಲ ದಾಖಲೆ ತನ್ನಲ್ಲಿದೆ, ಅತ್ತವರ ಕಣ್ಣೀರನ್ನು ಬಿಜೆಪಿಯವರು ಒರೆಸಿದ್ರಾ? ಕಾಲ್ತುಳಿತದ ಪ್ರಕರಣದಲ್ಲಿ ತನ್ನನ್ನು ಯಾಕೆ ದೋಷಿಯ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ, ಘಟನೆಗೆ ತಾನು ಹೇಗೆ ಜವಾಬ್ದಾರನಾಗುತ್ತೇನೆ ಎಂದು ಶಿವಕುಮಾರ್ ಪ್ರಶ್ನಿಸಿದರು.

ಇದನ್ನೂ ಓದಿ: Bengaluru Stampede; ಡ್ರಾಮಾ ಮಾಡೋದ್ರಲ್ಲಿ ಕುಮಾರಸ್ವಾಮಿ ಎಕ್ಸ್​ಪರ್ಟ್ ಅಂತ ಜನರಿಗೆ ಗೊತ್ತಿದೆ: ಡಿಕೆ ಸುರೇಶ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ