ಡಾಬಾ ರೈಸ್ ; ಸರಳ ವಿಧಾನದ ಜತೆ ಮನೆಯಲ್ಲೇ ಮಾಡಿ ಸವಿಯಿರಿ

ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಡಾಬಾ ರೈಸ್ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.


ಬೆಳಿಗ್ಗೆಯ ಉಪಹಾರಕ್ಕೆ, ಮಧ್ಯಾಹ್ನದ ತಿಂಡಿಗೆ, ರಾತ್ರಿ ಊಟಕ್ಕೆ ಯಾವ ಅಡುಗೆ ಮಾಡುವುದು ಎನ್ನುವುದು ಸಾಮಾನ್ಯವಾಗಿ ಮಹಿಳೆಯರಿಗೆ ಒಂದು ಸವಾಲಾಗಿರುತ್ತದೆ. ಅದರಲ್ಲೂ ಬೆಳಿಗ್ಗೆ ತಿಂಡಿಗೆ ದಿನಕ್ಕೊಂದು ಶೈಲಿ ಇರಲೇ ಬೇಕು. ಮಾಡಿದ್ದೇ ಮಾಡಿದರೆ ಮನೆ ಮಂದಿಗೆ ಇಷ್ಟವಾಗುವುದಿಲ್ಲ. ಹೀಗಾಗಿ ಇಂತಹ ಗೊಂದಲದಲ್ಲಿರುವವರು ಚಿಂತಿಸುವ ಅಗತ್ಯ ಇಲ್ಲ. ಒಮ್ಮೆ ಡಾಬಾ ರೈಸ್ ಮಾಡಿ ಸವಿಯಿರಿ. ಹೊಸ ರುಚಿ ಮನೆಮಂದಿಗೆ ಖುಷಿ ನೀಡುತ್ತದೆ.

ಡಾಬಾ ರೈಸ್ ಮಾಡಲು ಬೇಕಾಗುವ ಸಾಮಾಗ್ರಿಗಳು ಈರುಳ್ಳಿ, ಟೊಮೆಟೋ, ಹೂ ಕೋಸು, ಅನ್ನ, ಖಾರದ ಪುಡಿ, ಗರಂ ಮಸಾಲಾ, ಕರಿ ಮೆಣಸು, ಹಾಲಿನ ಕೆನೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿ ಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ಜೀರಿಗೆ, ಸಾಸಿವೆ, ಅರಿಶಿಣ.

ಡಾಬಾ ರೈಸ್ ಮಾಡುವ ವಿಧಾನ
ಒಂದು ಬಾಣಾಲೆಗೆ ಅಡುಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಸಾಸಿವೆ, ಜೀರಿಗೆ, ಈರುಳ್ಳಿ, ಕರಿ ಬೇವು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಹೂ ಕೋಸು, ಅರಿಶಿಣ ಪುಡಿ, ಖಾರದ ಪುಡಿ. ಗರಂ ಮಸಾಲಾ, ಕರಿ ಮೆಣಸು, ಟೊಮೆಟೋ, ಉಪ್ಪು ಹಾಕಿ ಫ್ರೈ ಮಾಡಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪು ಹಾಕಿ ಗ್ಯಾಸ್​ ಬಂದ್ ಮಾಡಿ. ಬಳಿಕ ಹಾಲಿನ ಕೆನೆ ಹಾಕಿಕೊಳ್ಳಿ. ನಂತರ ಅನ್ನವನ್ನು ಹಾಕಿ ಕಲಸಿಕೊಳ್ಳಿ. ಈಗ ಡಾಬಾ ರೈಸ್ ಸವಿಯಲು ಸಿದ್ಧ.

ಇದನ್ನೂ ಓದಿ:

ಬಳ್ಳಾರಿ ಸ್ಪೇಷಲ್ ಮಸಾಲೆ ರೊಟ್ಟಿ; ಸರಳ ವಿಧಾನದ ಜತೆ ಮಾಡಿ ಸವಿಯಿರಿ

ಮಟನ್ ದೊನ್ನೆ ಬಿರಿಯಾನಿ; ಮನೆಯಲ್ಲೇ ಸರಳ ವಿಧಾನದ ಜತೆ ಮಾಡಿ ಸವಿಯಿರಿ

 

Click on your DTH Provider to Add TV9 Kannada