Video: ಸಾಲು ಸಾಲು ರಜೆ, ಮಂತ್ರಾಲಯಕ್ಕೆ ಹರಿದು ಬರುತ್ತಿರುವ ಭಕ್ತಸಾಗರ
ಕ್ರಿಸ್ಮಸ್, ಹೊಸ ವರ್ಷದ ಸಾಲು ಸಾಲು ರಜೆ ಹಿನ್ನೆಲೆ ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಾಣುತ್ತಿದೆ. ಡಿಸೆಂಬರ್ 25ರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಜನವರಿ 2ರವರೆಗೂ ಇದೇ ರೀತಿ ಮುಂದುವರೆಯಲಿದೆ ಎಂದು ಶ್ರೀ ಮಠ ಮಾಹಿತಿ ನೀಡಿದೆ
ಕ್ರಿಸ್ಮಸ್, ಹೊಸ ವರ್ಷದ ಸಾಲು ಸಾಲು ರಜೆ ಹಿನ್ನೆಲೆ ಶ್ರೀ ರಾಘವೇಂದ್ರಸ್ವಾಮಿ ಮಠ, ಮಂತ್ರಾಲಯಕ್ಕೆ ಭಕ್ತಸಾಗರವೇ ಹರಿದುಬರುತ್ತಿದೆ. ಮಂತ್ರಾಲಯದಲ್ಲಿ ಭಕ್ತರ ಸಂಖ್ಯೆಯಲ್ಲಿ ಭಾರಿ ಹೆಚ್ಚಳ ಕಾಣುತ್ತಿದೆ. ರಾಯರ ಸನ್ನಿಧಿ ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿರುವ ಮಂತ್ರಾಲಯದ ರಾಯರ ಮಠದಲ್ಲಿ ಪ್ರತಿನಿತ್ಯ ವಿವಿಧ ರೀತಿಯ ಸೇವೆಗಳನ್ನು ರಾಯರಿಗೆ ಆಯೋಜಿಸಲಾಗುತ್ತದೆ. ಡಿಸೆಂಬರ್ 25ರಿಂದ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಜನವರಿ 2ರವರೆಗೂ ಇದೇ ರೀತಿ ಮುಂದುವರೆಯಲಿದೆ ಎಂದು ಶ್ರೀ ಮಠ ಮಾಹಿತಿ ನೀಡಿದೆ. ಮಠದ ರೂಂಗಳಿಗೆ ಆನ್ಲೈನ್ ಬುಕಿಂಗ್ ಬಂದ್ ಮಾಡಲಾಗಿದ್ದು, ಆಫ್ಲೈನ್ ಬುಕಿಂಗ್ಗೆ ಅವಕಾಶ ಕಲ್ಪಿಸಲಾಗಿದೆ. ಮಂತ್ರಾಲಯದಲ್ಲಿ ಎಲ್ಲಿ ನೋಡಿದರಲ್ಲಿ ಜನರು ತುಂಬಿ ತುಳುಕುತ್ತಿರುವ ದೃಶ್ಯ ಇಲ್ಲಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Dec 30, 2024 10:25 AM
Latest Videos