Loading video

ಕುಮಾರಸ್ವಾಮಿ ಮಾತುಗಳಿಗೆ ಹೆದರುವ ಮಗ ನಾನಲ್ಲ, ಆಸ್ತಿ ವಿವರ ಬಹಿರಂಗಪಡಿಸಲಿ: ಶಿವಕುಮಾರ್

|

Updated on: Apr 05, 2025 | 2:58 PM

ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವೆ ಬಹಳ ದಿನಗಳಿಂದ ರಾಜಕೀಯ ವೈಷಮ್ಯ ಜಾರಿಯಲ್ಲಿದೆ, ಅವರಿಬ್ಬರ ಹೇಳಿಕೆಗಳ ಮೂಲಕ ಅದು ಜಗಜ್ಜಾಹೀರಾಗಿದೆ, 2019 ರಲ್ಲಿ ಮಂಡ್ಯ ಲೋಕಸಭಾ ಸ್ಥಾನಕ್ಕೆ ಮಧ್ಯಂತರ ಚುನಾವಣೆ ನಡೆದಾಗ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುವಾಗ ಶಿವಕುಮಾರ್ ಮತ್ತು ಕುಮಾರಸ್ವಾಮಿ ತಾವಿಬ್ಬರು ಜೋಡೆತ್ತಗಳು ಅಂತ ಹೇಳಿಕೊಳ್ಳುತ್ತಿದ್ದರು.

ಬೆಂಗಳೂರು, ಏಪ್ರಿಲ್ 5: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರೇನೋ (HD Kumaraswamy) ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ಧ ಯುದ್ಧ ಸಾರಿದ್ದೇನೆ ಅಂತ ಹೇಳಿದರು. ಅದರೆ ಅವರ ಮಾತಿಗೆ ಶಿವಕುಮಾರ್ ಎದಿರೇಟು ನೀಡಿದ್ದಾರೆ. ಇಂದು ನಗರದಲ್ಲಿ ಶಿವಕುಮಾರ್ ಮಾಧ್ಯಮಗಳಿಗೆ ಬಹಳ ಕೋಪದಿಂದ ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿಯ ಮಾತುಗಳಿಗೆ ಹೆದರುವ ಮಗ ನಾನಲ್ಲ, ಅವರ ಹೆಸರಲ್ಲಿ ಎಷ್ಟು ಭೂಮಿಯಿದೆ ಅಂತ ಬಹಿರಂಗ ಪಡಿಸಲಿ, ನನ್ನ ಹೆಸರಲ್ಲಿ ಮತ್ತು ಮಕ್ಕಳ ಹೆಸರಲ್ಲಿ ಎಷ್ಟು ಭೂಮಿ ಇದೆ ನಾನು ಬಹಿರಂಗ ಮಾಡ್ತಿನಿ, ನಾನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದೇನೆ ಅಂತೇನಾದರೂ ಸಾಬೀತಾದರೆ ಯಾವುದೇ ಶಿಕ್ಷೆಗೆ ಸಿದ್ಧ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ:   ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ ಕೆಲಸ ಅಪೂರ್ಣ, ಪ್ರತ್ಯೇಕ ಮೀಟಿಂಗ್ ಬೇಕೆಂದ ತಮಿಳುನಾಡು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ