Loading video

ಜಾತಿ ಗಣತಿ ವರದಿಯಿಂದ ಯಾರಿಗೂ ಅನ್ಯಾಯವಾಗದಂತೆ ಸಿಎಂ ಸಿದ್ದರಾಮಯ್ಯ ನೋಡಿಕೊಳ್ಳುವ ಭರವಸೆಯಿದೆ: ಸುರೇಶ್

Updated on: Apr 22, 2025 | 12:14 PM

ಜಾತಿ ಗಣತಿ ವರದಿಯನ್ನು ಯಾರೂ ವಿರೋಧಿಸುತ್ತಿಲ್ಲ, ಕಾಂಗ್ರೆಸ್ ವಿರೋಧಿಸಲ್ಲ ಮತ್ತು ಬಿಜೆಪಿಯು ವಿರೋಧಿಸಲ್ಲ, ವಿರೋಧ ಪಕ್ಷ ನಾಯಕ ಆರ್ ಅಶೋಕ ಮತ್ತು ಸುನೀಲ ಕುಮಾರ್ ಕೇವಲ ರಾಜಕಾರಣಕ್ಕೋಸ್ಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಯಾಕೆಂದರೆ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಜಾತಿ ಗಣತಿಯನ್ನು ಒಪ್ಪಿಕೊಂಡಿದ್ದಾರೆ ಎಂದು ಸುರೇಶ್ ಹೇಳಿದರು.

ಬೆಂಗಳೂರು, ಏಪ್ರಿಲ್ 22: ಜಾತಿ ಗಣತಿ ವರದಿಗೆ ಸಂಬಂಧಿಸಿದಂತೆ ಜನರಲ್ಲಿ ಬಹಳಷ್ಟು ಅನುಮಾನಗಳಿವೆ, ಅವೆಲ್ಲ ನಿವಾರಣೆಯಾಗಬೇಕು ಎಂದು ಮಾಜಿ ಸಂಸದ ಡಿಕೆ ಸುರೇಶ್ (DK Suresh) ಹೇಳಿದರು. ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕಳೆದ 15 ವರ್ಷಗಳಲ್ಲಿ ನಗರ ಪ್ರದೇಶಗಳ ಜನಸಂಖ್ಯೆಯಲ್ಲಿ ಬಹಳ ಏರಿಕೆಯಾಗಿದೆ, ಹೀಗೆ ವಲಸೆ ಬಂದವರನ್ನು ಜಾತಿ ಗಣತಿ ಸಮೀಕ್ಷೆಯಲ್ಲಿ ಸೇರಿಸಲಾಗಿದೆಯೇ ಅಂತ ಮಾಹಿತಿ ಇಲ್ಲ, ಕುರುಬರ ಸಂಖ್ಯೆ ಜಾಸ್ತಿ ತೋರಿಸಲಾಗಿದೆ ಅಂತಲೂ ಹೇಳುತ್ತಿದ್ದಾರೆ, ಸಿದ್ದರಾಮಯ್ಯನವರು ರಾಜಕಾರಣದಲ್ಲಿ ಅಪಾರ ಅನುಭವವಿರುವವರು, ಜನ ಕಾಂಗ್ರೆಸ್ ಮೇಲೆ ನಂಬಿಕೆಯಿಟ್ಟು 140 ಸೀಟುಗಳನ್ನು ನೀಡಿದ್ದಾರೆ, ಯಾವ ಸಮುದಾಯಕ್ಕೂ ಅನ್ಯಾಯವಾಗದ ಹಾಗೆ ಅವರು ನೋಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ:   ಜಾತಿ ಗಣತಿ ವರದಿ ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕ ವರದಿ ರೂಪಿಸಿ: ಅಶೋಕ್ ಆಗ್ರಹ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ