ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ: ಹೀಗೆಂದಿದ್ದೇಕೆ ಡಿಕೆ ಸುರೇಶ್? ಇಲ್ಲಿದೆ ಕಾರಣ

| Updated By: ಆಯೇಷಾ ಬಾನು

Updated on: Sep 19, 2024 | 12:51 PM

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್ ಅವರು, ಮೋದಿ ತಾಯಿ ಬಗ್ಗೆ ಮಾತನಾಡಿದವರನ್ನು ಮಂತ್ರಿ ಮಾಡಿದ್ದಾರೆ. ಬಿಜೆಪಿ ಅವರು ಮೋದಿ ತಾಯಿ ಬಗ್ಗೆ ಮಾತನಾಡಿದವರನ್ನು ಸಹಿಸಿಕೊಂಡಿರಬಹುದು. ಆದರೆ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ಮೋದಿ ಹಾಗೂ ಅವರ ತಾಯಿ ಬಗ್ಗೆ ಅಪಾರವಾದ ಗೌರವವಿದೆ ಎಂದಿದ್ದಾರೆ.

ಬೆಂಗಳೂರು, ಸೆ.19: ಮೋದಿ ತಾಯಿ ಬಗ್ಗೆ ಮಾತನಾಡಿದ್ರೆ ಅವರು ಸಹಿಸಿಕೊಳ್ಳಬಹುದು. ಆದರೆ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. ಹೆಚ್​ಡಿ ಕುಮಾರಸ್ವಾಮಿಗೆ ಮಂತ್ರಿ ಮಾಡಿರಬಹುದು, ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ಸಮುದಾಯದ ಬಗ್ಗೆ ಮಾತನಾಡಿದ್ದು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್ ಅವರು, ಮೋದಿ ತಾಯಿ ಬಗ್ಗೆ ಮಾತನಾಡಿದವರನ್ನು ಮಂತ್ರಿ ಮಾಡಿದ್ದಾರೆ. ಬಿಜೆಪಿ ಅವರು ಮೋದಿ ತಾಯಿ ಬಗ್ಗೆ ಮಾತನಾಡಿದವರನ್ನು ಸಹಿಸಿಕೊಂಡಿರಬಹುದು. ಆದರೆ ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ನನಗೆ ಮೋದಿ ಹಾಗೂ ಅವರ ತಾಯಿ ಬಗ್ಗೆ ಅಪಾರವಾದ ಗೌರವವಿದೆ. ನಾನು ಅವರ ಬಗ್ಗೆ ಎಂದೂ ಮಾತನಾಡಿಲ್ಲ. ನಾವು ರಾಜಕೀಯವಾಗಿ ಟೀಕೆ, ಟಿಪ್ಪಣಿಗಳನ್ನು ಮಾಡುತ್ತಿರುತ್ತೇವೆ. ಒಬ್ಬ ದೇಶದ ಪ್ರಧಾನಿಗೆ, ಗೃಹ ಮಂತ್ರಿಗೆ, ವಿರೋಧ ಪಕ್ಷದ ನಾಯಕನಿಗೆ ಎಷ್ಟು ಗೌರವ ಕೊಡಬೇಕೋ ಅಷ್ಟು ಕೊಟ್ಟಿದ್ದೇವೆ. ನಮಗೆ ಅದು ಗೊತ್ತಿದೆ. ಆದರೆ ಅವರು ಕೀಳಾಗಿ ಮಾತನಾಡಿದಾಗ ನಾವೂ ಕೀಳಾಗಿ ಉತ್ತರ ಕೊಡಬೇಕಾಗುತ್ತೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ