Loading video

ನನ್ನ ಬಗ್ಗೆ ಅಸೂಯೆ ಪಡೋದ್ರಿಂದ ಕುಮಾರಸ್ವಾಮಿಗೆ ಖುಷಿ ಸಿಗೋದಾದರೆ ಬಹಳ ಸಂತೋಷ: ಡಿಕೆ ಶಿವಕುಮಾರ್

Updated on: Jun 07, 2025 | 8:00 PM

ಮಂಡ್ಯದಲ್ಲಿಂದು ಕುಮಾರಸ್ವಾಮಿಯವರಿಗೆ ಡಿಕೆ ಸುರೇಶ್ ನಿಮ್ಮ ಅರೋಗ್ಯದ ಬಗ್ಗೆ ಮಾತಾಡಿದ್ದಾರೆ ಅಂತ ಪತ್ರಕರ್ತರು ಹೇಳಿದಾಗ ಅವರು ಖಡಕ್ಕಾದ ಪ್ರತಿಕ್ರಿಯೆ ನೀಡಿದ್ದರು. ಸುರೇಶ್ ಹಿಂದೊಮ್ಮೆ ಹೆಚ್ ಡಿ ದೇವೇಗೌಡರ ಅರೋಗ್ಯದ ಬಗ್ಗೆಯೂ ಮಾತಾಡಿ ಟೀಕಿಗೊಳಗಾಗಿದ್ದರು. ಈ ಎರಡು ರಾಜಕೀಯ ಕುಟುಂಬಗಳ ನಡುವೆ ವಾದ ವಿವಾದ, ಮಾತು ಪ್ರತಿಮಾತು ಕನ್ನಡಿಗರಿಗೆ ಹೊಸದೇನಲ್ಲ.

ಬೆಂಗಳೂರು, ಜೂನ್ 7: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಅರೋಗ್ಯದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿಕೆ ಸುರೇಶ್ ಅವರಿಗೆ ಹೆಚ್ಚಿನ ಕಾಳಜಿ ಇರುವಂತಿದೆ. ಇವತ್ತು ನಗರದಲ್ಲಿ ಅವಸರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಶಿವಕುಮಾರ್, ಕುಮಾರಸ್ವಾಮಿಯವರನ್ನು ಗಮನಿಸ್ತಾ ಇದ್ದೀನಿ, ನನ್ನ ಬಗ್ಗೆ ಟೀಕೆ ಮಾಡ್ತಿದ್ದಾರೆ, ನನ್ನನ್ನು ಟೀಕಿಸುವುದರಿಂದ, ನನ್ನ ಬಗ್ಗೆ ಅಸೂಯೆ ಪಡೋದ್ರಿಂದ ಅವರಿಗೆ ಸಂತೋಷ ಸಿಗೋದಾದರೆ, ಆರೋಗ್ಯ ಸುಧಾರಣೆ ಆಗುವುದಾದರೆ ಬಹಳ ಸಂತೋಷ; ಅವರು ತನ್ನನ್ನು ಮತ್ತಷ್ಟು ಟೀಕಿಸಲಿ, ಇನ್ನಷ್ಟು ಅಸೂಯೆ ಪಡಲಿ, ಅವರ ಅರೋಗ್ಯ ಸುಧಾರಣೆಯಾಗೋದು ಮುಖ್ಯ ಎಂದು ಹೇಳಿದರು.

ಇದನ್ನೂ ಓದಿ:  Bengaluru Stampede; ನನ್ನ ಕಣ್ಣೀರು ಬಗ್ಗೆ ಯಾಕೆ ಚರ್ಚೆ? ಬೇರೆಯವರು ಕಣ್ಣೀರು ಹಾಕಿದ್ದೇನಾಯಿತು? ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ