ನೀವು ಸುಮ್ಮನಿದ್ದರೆ ಅದೇ ದೇಶಕ್ಕೆ ಮಾಡೋ ದೊಡ್ಡ ಸೇವೆ: ಜಮೀರ್​ಗೆ ಪ್ರಲ್ಹಾದ್ ಜೋಶಿ ಟಾಂಗ್

Updated on: May 03, 2025 | 4:42 PM

ಪಾಕಿಸ್ತಾನ ನಮ್ಮ ವಿರೋಧಿ ದೇಶ. ಅಗತ್ಯಬಿದ್ದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೇಳಿದರೆ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಸೂಸೈಡ್ ಬಾಂಬರ್ ಆಗಿ ಹೋಗುವೆ ಎಂಬ ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದಾರೆ. ಜೋಶಿ ಹೇಳಿದ್ದೇನೆಂದು ವಿಡಿಯೋದಲ್ಲಿ ನೋಡಿ.

ಹುಬ್ಬಳ್ಳಿ, ಮೇ 3: ‘ಇವೆಲ್ಲ ಅತ್ಯಂತ ಬಾಲಿಶವಾದ ಹೇಳಿಕೆಗಳು. ಸೇನೆಯನ್ನು ನಂಬಿ ಸುಮ್ಮನಿರಿ ಸಾಕು. ನಮ್ಮ ಜವಾನರ ಬಗ್ಗೆ, ಸೈನಿಕರ ಬಗ್ಗೆ, ಗುಪ್ತಚರ ವ್ಯವಸ್ಥೆ ಬಗ್ಗೆ ನಂಬಿಕೆ ಇಟ್ಟು ಸುಮ್ಮನೆ ಶಾಂತವಾಗಿರಿ. ಏನೂ ಭಾಷಣ ಮಾಡದೆ, ಸೈನ್ಯದ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಂಡು ಸುಮ್ಮನೆ ಶಾಂತವಾಗಿ ಇದ್ದರೆ ಅದೇ ದೊಡ್ಡ ಸೇವೆ’ ಎಂದು ಕರ್ನಾಟಕ ಸಚಿವ ಜಮೀರ್ ಅಹ್ಮದ್​​ಗೆ ಪ್ರಲ್ಹಾದ್ ಜೋಶಿ ಟಾಂಗ್ ನೀಡಿದರು. ಅಗತ್ಯಬಿದ್ದಲ್ಲಿ ಸೂಸೈಡ್ ಬಾಂಬರ್ ಆಗಿ ಪಾಕಿಸ್ತಾನದ ವಿರುದ್ಧ ಹೋರಾಡುವೆ ಎಂದು ಜಮೀರ್ ಅಹ್ಮದ್ ಹೇಳಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ