AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

7 ವರ್ಷಗಳ ಬಳಿಕ ಇರಾನ್​ನಿಂದ ಭಾರತ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹೊತ್ತ ಹಡಗು!

7 ವರ್ಷಗಳ ಬಳಿಕ ಇರಾನ್​ನಿಂದ ಭಾರತ ಗ್ಯಾಸ್ ಖರೀದಿ: ಮಂಗಳೂರಿಗೆ ಬರಲಿದೆ LPG ಹೊತ್ತ ಹಡಗು!

ಗಣಪತಿ ಶರ್ಮಾ
|

Updated on: Mar 26, 2026 | 6:56 AM

Share

ಏಳು ವರ್ಷಗಳ ನಂತರ ಭಾರತವು ಇರಾನ್‌ನಿಂದ LPG ಅನಿಲವನ್ನು ಖರೀದಿಸುತ್ತಿದೆ. ಅಮೆರಿಕದ ನಿರ್ಬಂಧಗಳ ತಾತ್ಕಾಲಿಕ ತೆರವು ಮತ್ತು ಪ್ರಧಾನಿ ಮೋದಿ ಅವರ ರಾಜತಾಂತ್ರಿಕ ಪ್ರಯತ್ನಗಳು ಇದಕ್ಕೆ ಕಾರಣ. ದೇಶದಲ್ಲಿನ ಎಲ್​ಪಿಜಿ ಮತ್ತು ಕಚ್ಚಾ ತೈಲ ಕೊರತೆಯನ್ನು ನಿವಾರಿಸುವುದು ಈ ಖರೀದಿಯ ಪ್ರಮುಖ ಉದ್ದೇಶವಾಗಿದೆ. ಭಾರತ ಸರ್ಕಾರ ನಿರಂತರವಾಗಿ ಇರಾನ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ.

ನವದೆಹಲಿ/ಬೆಂಗಳೂರು, ಮಾರ್ಚ್ 26: ಏಳು ವರ್ಷಗಳ ಸುದೀರ್ಘ ಅಂತರದ ನಂತರ ಭಾರತವು ಇರಾನ್‌ನಿಂದ ಎಲ್​ಪಿಜಿ ಅನಿಲವನ್ನು ಖರೀದಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಭಾರತ 2019ರಲ್ಲಿ ಕೊನೆಯ ಬಾರಿಗೆ ಇರಾನ್‌ನಿಂದ ಅನಿಲ ಖರೀದಿಸಿತ್ತು. ಇದೀಗ ಅಮೆರಿಕದ ನಿರ್ಬಂಧಗಳ ತಾತ್ಕಾಲಿಕ ತೆರವು ಹಿನ್ನೆಲೆಯಲ್ಲಿ ಎಲ್​​ಪಿಜಿ ಖರೀದಿ ನಿರ್ಧಾರಕ್ಕೆ ಬಂದಿದೆ. ದೇಶದಲ್ಲಿ ಎದುರಾಗಿರುವ LPG ಗ್ಯಾಸ್ ಸಮಸ್ಯೆ ಮತ್ತು ಕಚ್ಚಾ ತೈಲ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಭಾರತವು ಹಗಲಿರುಳು ಪ್ರಯತ್ನಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ, ಇರಾನ್‌ನ ವಿದೇಶಾಂಗ ಇಲಾಖೆ ಮತ್ತು ಅಲ್ಲಿನ ಮುಖ್ಯಸ್ಥರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತ ಸರ್ಕಾರವು ಇರಾನ್ ಸರ್ಕಾರದೊಂದಿಗೆ ಈ ಕುರಿತು ನಿರಂತರ ಮಾತುಕತೆ ನಡೆಸುತ್ತಿದ್ದು, ಏಳು ವರ್ಷಗಳ ನಂತರ ಇರಾನ್‌ನಿಂದ LPG ಗ್ಯಾಸ್ ಖರೀದಿ ಮಾಡಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆ. ಮತ್ತೊಂದು ಮೂಲಗಳ ಪ್ರಕಾರ, ಇರಾನ್​ನಿಂದ ಎಲ್​​ಪಿಜಿ ತುಂಬಿಕೊಂಡ ಹಡಗು ಈಗಾಗಲೇ ಹೊರಟಿದ್ದು, ಶೀಘ್ರದಲ್ಲೇ ಮಂಗಳೂರು ಬಂದರು ತಲುಪಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us