ನಾಳಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ನಿಶ್ಚಿತವಾಗಿ ಪಾಕಿಸ್ತಾನವನ್ನು ಸೋಲಿಸಲಿದೆ: ಕ್ರಿಕೆಟ್ ಪ್ರೇಮಿಗಳು
ಹೆಚ್ಚಿನ ಕ್ರಿಕೆಟ್ ಪ್ರೇಮಿಗಳು ವಿರಾಟ್ ಕೊಹ್ಲಿಯ ಫ್ಯಾನ್ಗಳು. ಅವರು ಚೆನ್ನಾಗಿ ಆಡಿದರೆ ಭಾರತ ಗೆಲ್ಲುತ್ತದೆ ಎಂದು ಬಹಳಷ್ಟು ಜನ ಹೇಳುತ್ತಾರೆ. ಅವರ ಬ್ಯಾಟ್ ನಿಂದ ಶತಕ ಸಿಡಿಯದೆ ಬಹಳ ದಿನಗಳಾಯಿತು, ಅದಕ್ಕಾಗಿ ಕಾಯುತ್ತಿದ್ದೇವೆ ಅಂತ ಒಬ್ಬ ಅಭಿಮಾನಿ ಹೇಳೋದ್ರಲ್ಲಿ ಸತ್ಯಾಂಶ ಅಡಗಿದೆ. ಓಡಿಐಗಳಲ್ಲಿ 50 ಶತಕ ಬಾರಿಸಿರುವ ಕೊಹ್ಲಿ ಮೊನ್ನೆ ಇಂಗ್ಲೆಂಡ್ ವಿರುದ್ಧ ನಡೆದ 3-ಪಂದ್ಯಗಳ ಸರಣಿಯಲ್ಲಿ ಒಂದು ಅರ್ಧ ಶತಕ ಬಾರಿಸುವಲ್ಲಿ ಮಾತ್ರ ಸಫಲರಾಗಿದ್ದರು.
ದೇವನಹಳ್ಳಿ: ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನಾಳೆ ಭಾರತ ಮತ್ತು ಪಾಕಿಸ್ತಾನದ ನಡುವೆ ಮಹತ್ವದ ಪಂದ್ಯ ನಡೆಯಲಿದೆ. ಬದ್ಧ ವೈರಿಗಳ ನಡುವೆ ನಡೆಯುವ ಪಂದ್ಯ ಯಾವುದೇ ಆವೃತ್ತಿಯದ್ದಾಗಿರಲಿ, ಅದು ರೋಮಾಂಚನದಿಂದ ಕೂಡಿರುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ನಮ್ಮ ವರದಿಗಾರ ದೇವನಹಳ್ಳಿಯಲ್ಲಿ ಕೆಲ ಕ್ರಿಕೆಟ್ ಪ್ರೇಮಿಗಳೊಂದಿಗೆ ಮಾತಾಡಿದ್ದಾರೆ. ರೋಹಿತ್ ಶರ್ಮಾ ತಂಡವೇ ಗೆಲ್ಲಲಿದೆ ಎಂದು ಎಲ್ಲರೂ ಹೇಳುತ್ತಾರೆ. ಬ್ಯಾಟಿಂಗ್ ನಲ್ಲಿ ರೋಹಿತ್, ವಿರಾಟ್ ಕೊಹ್ಲಿ ಮತ್ತು ಶುಭ್ಮನ್ ಗಿಲ್ ಮಿಂಚಲಿದ್ದಾರೆ ಅನ್ನೋದು ಅವರ ಅಭಿಪ್ರಾಯ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಕೊಹ್ಲಿ- ರೋಹಿತ್ ಪ್ರದರ್ಶನ ಹೇಗಿದೆ?