ರಾಜೌರಿಯಲ್ಲಿ ಪಾಕಿಸ್ತಾನ ಎಸೆದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಿದ ಭಾರತೀಯ ಸೇನೆ

Updated on: May 13, 2025 | 5:47 PM

ಜಮ್ಮುವಿನ ರಾಜೌರಿಯಲ್ಲಿ ಭಾರತೀಯ ಸೇನೆ ಜೀವಂತ ಶೆಲ್‌ಗಳನ್ನು ನಿಷ್ಕ್ರಿಯಗೊಳಿಸಿದೆ. ಸ್ಥಳೀಯರ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗಿದೆ. ಗಡಿ ಗ್ರಾಮಗಳಲ್ಲಿರುವ ಸ್ಥಳೀಯರ ಸುರಕ್ಷತೆಗಾಗಿ ಭಾರತೀಯ ಸೇನೆಯು ಅವುಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವುದು ಸರಿಯಲ್ಲ ಎಂದು ಸ್ಪಷ್ಟ ಸಂದೇಶವನ್ನು ಕಳುಹಿಸಿದ ನಂತರವೂ ಪಾಕಿಸ್ತಾನದ ಸೈನ್ಯವು ಆಕ್ರಮಣದಿಂದ ಹಿಂದೆ ಸರಿಯುವುದಿಲ್ಲ ಎಂಬ ಭಯ ಗಡಿ ಗ್ರಾಮಗಳಲ್ಲಿ ಇದೆ. 

ರಾಜೌರಿ, ಮೇ 13: ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಜೌರಿ ಜಿಲ್ಲೆಯ ನಿಯಂತ್ರಣ ರೇಖೆಯ (LoC) ಬಳಿಯ ವಸತಿ ಪ್ರದೇಶಗಳಲ್ಲಿ ಸ್ಫೋಟಗೊಳ್ಳದ ಶೆಲ್‌ಗಳನ್ನು ಭಾರತೀಯ ಸೇನೆ ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನವು ಎಲ್‌ಒಸಿಯಾದ್ಯಂತ ಶೆಲ್ ದಾಳಿ ನಡೆಸಿದ ನಂತರ ಜೀವಂತ ಶೆಲ್‌ಗಳು ಕಂಡುಬಂದಿತ್ತು. ಆದರೆ, ಗಡಿ ಗ್ರಾಮಗಳಲ್ಲಿರುವ ಸ್ಥಳೀಯರ ಸುರಕ್ಷತೆಗಾಗಿ ಭಾರತೀಯ ಸೇನೆಯು ಅವುಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದಿಂದ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವುದು ಸರಿಯಲ್ಲ ಎಂದು ಸ್ಪಷ್ಟ ಸಂದೇಶವನ್ನು ಕಳುಹಿಸಿದ ನಂತರವೂ ಪಾಕಿಸ್ತಾನದ ಸೈನ್ಯವು ಆಕ್ರಮಣದಿಂದ ಹಿಂದೆ ಸರಿಯುವುದಿಲ್ಲ ಎಂಬ ಭಯ ಗಡಿ ಗ್ರಾಮಗಳಲ್ಲಿ ಇದೆ. ಜಮ್ಮುವಿನ ಸಾಂಬಾ ಜಿಲ್ಲೆಯ ಗಡಿ ಗ್ರಾಮವೊಂದರ ಸ್ಥಳೀಯ ನಿವಾಸಿಗಳು ನಿನ್ನೆ ರಾತ್ರಿ ಸ್ಫೋಟಗಳು ಸಂಭವಿಸುತ್ತಿರುವುದನ್ನು ಕೇಳಿದ್ದಾರೆ. ಪಾಕಿಸ್ತಾನದ ಶೆಲ್ ದಾಳಿಯ ನಂತರ ಪೀಡಿತ ಮನೆಯ ಛಾವಣಿ ಮತ್ತು ಅಡುಗೆಮನೆಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಟಿಯಿಂದ ಜೀವಂತ ಶೆಲ್​ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ