ಜಪಾನ್​ನಲ್ಲಿ ಭಾರತದ ಮೊದಲ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಆರಂಭ; ಹೀಗಿರಲಿದೆ ಬುಲೆಟ್ ಟ್ರೈನ್

Updated on: May 30, 2025 | 10:11 PM

ಭಾರತದ ಮೊದಲ ಬುಲೆಟ್ ರೈಲಾದ ಶಿಂಕನ್ಸೆನ್ ನ ಪ್ರಾಯೋಗಿಕ ಸಂಚಾರ ಜಪಾನ್ ನಲ್ಲಿ ಆರಂಭವಾಗಿದೆ. 2026ರ ಆರಂಭದಲ್ಲಿ ಭಾರತಕ್ಕೆ ಈ ರೈಲುಗಳ ರವಾನೆಯಾಗಲಿದೆ. ಅಹಮದಾಬಾದ್-ಮುಂಬೈ ಕಾರಿಡಾರ್ ನಲ್ಲಿ ಸಂಚರಿಸಲಿರುವ ಭಾರತದ ಮೊದಲ ಬುಲೆಟ್ ರೈಲು ಶಿಂಕನ್ಸೆನ್ ಜಪಾನ್ ನಲ್ಲಿ ಸಂಚಾರದ ಟ್ರಯಲ್ ಆರಂಭಿಸಿದೆ. ಭಾರತವು ತನ್ನ ಮೊದಲ ಬುಲೆಟ್ ರೈಲು ಕಾರಿಡಾರ್ ಗಾಗಿ ಎರಡು E5 ಸರಣಿಯ ಶಿಂಕನ್ಸೆನ್ ರೈಲು ಸೆಟ್ ಗಳನ್ನು ಸ್ವೀಕರಿಸಲಿದೆ.

ಜಪಾನ್, ಮೇ 30: ಅಹಮದಾಬಾದ್ ಮತ್ತು ಮುಂಬೈ ನಡುವೆ ಸಂಚರಿಸಲಿರುವ ಭಾರತದ ಮೊದಲ ಬುಲೆಟ್ ರೈಲಿನ (Bullet Train) ಪ್ರಾಯೋಗಿಕ ಸಂಚಾರ ಜಪಾನ್ ನಲ್ಲಿ ಆರಂಭವಾಗಿದೆ. ಭಾರತ ದೇಶದ ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದಾದ ಅಹಮದಾಬಾದ್-ಮುಂಬೈ ಕಾರಿಡಾರ್ ನಲ್ಲಿ ನಿರ್ಮಾಣ ಕಾರ್ಯ ಪೂರ್ಣ ವೇಗದಲ್ಲಿ ನಡೆಯುತ್ತಿದೆ. ಇದರ ನಡುವೆ ಶಿಂಕನ್ಸೆನ್ ಬುಲೆಟ್ ರೈಲಿನ ಪ್ರಾಯೋಗಿಕ ಸಂಚಾರ ಜಪಾನ್ ನಲ್ಲಿ ಅಧಿಕೃತವಾಗಿ ಆರಂಭವಾಗಿದೆ. ನಮ್ಮ ದೇಶದ ಮೊದಲ ಬುಲೆಟ್ ರೈಲು ಯೋಜನೆಗಾಗಿ ಜಪಾನ್ ಭಾರತಕ್ಕೆ ಎರಡು ಶಿಂಕನ್ಸೆನ್ ಬುಲೆಟ್ ರೈಲುಗಳನ್ನು ನೀಡುತ್ತಿದೆ. ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ಹೈ-ಸ್ಪೀಡ್ ರೈಲಿನ ಪರೀಕ್ಷಾ ಸಂಚಾರವನ್ನು ಈಗ ನಡೆಸಲಾಗುತ್ತಿದೆ. 2026ರ ಆರಂಭದಲ್ಲಿ ಈ ರೈಲುಗಳು ಭಾರತಕ್ಕೆ ಆಗಮಿಸಲಿದ್ದು, ಭಾರತದಲ್ಲಿ ಮೊದಲ ಬುಲೆಟ್ ಟ್ರೈನ್ ಸಂಚಾರ ಆರಂಭವಾಗಲಿದೆ.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ