IND vs AUS: ಗೋಲ್ಡನ್​ ಡಕ್​ಗೆ ಬಲಿಯಾಗುವುದರಿಂದ ಪಾರಾದ ಕೊಹ್ಲಿ..! ವಿಡಿಯೋ ನೋಡಿ

IND vs AUS: ಗೋಲ್ಡನ್​ ಡಕ್​ಗೆ ಬಲಿಯಾಗುವುದರಿಂದ ಪಾರಾದ ಕೊಹ್ಲಿ..! ವಿಡಿಯೋ ನೋಡಿ

ಪೃಥ್ವಿಶಂಕರ
|

Updated on: Jan 03, 2025 | 6:58 AM

Virat Kohli: ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಪಾರಾಗಿದ್ದಾರೆ. ಸ್ಕಾಟ್ ಬೋಲ್ಯಾಂಡ್ ಎಸೆದ ಚೆಂಡು ಕೊಹ್ಲಿಯ ಬ್ಯಾಟ್‌ನ ಅಂಚನ್ನು ತಾಗಿ ಸ್ಲಿಪ್‌ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್ ಕೈಸೇರಿತು. ಆದರೆ ಮರು ಪರಿಶೀಲನೆ ಮಾಡಿದ ಮೂರನೇ ಅಂಪೈರ್ ವಿರಾಟ್ ಕೊಹ್ಲಿ ನಾಟೌಟ್ ಎಂದು ತೀರ್ಪು ನೀಡಿದ್ದಾರೆ. ಹೀಗಾಗಿ ಕೊಹ್ಲಿ ಮೊದಲ ಎಸೆತದಲ್ಲೇ ಔಟಾಗುವುದರಿಂದ ಪಾರಾದರು.

ಸಿಡ್ನಿ ಟೆಸ್ಟ್​ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾಕ್ಕೆ ಆರಂಭಿಕ ಆಘಾತ ಎದುರಾಗಿದೆ. ಆರಂಭಿಕರಿಬ್ಬರು ಕೇವಲ 17 ರನ್​ಗಳಿಗೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ರೋಹಿತ್ ಶರ್ಮಾ ಕೊನೆಯ ಟೆಸ್ಟ್​ನಿಂದ ಹೊರಬಿದ್ದ ಕಾರಣದಿಂದಾಗಿ ಮತ್ತೊಮ್ಮೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಕೆಎಲ್ ರಾಹುಲ್ 4 ರನ್​ಗಳಿಗೆ ಸುಸ್ತಾದರೆ, ಜೈಸ್ವಾಲ್ 14 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದಾರೆ. ಇದೇ ವೇಳೆ ನಾಲ್ಕನೇ ಕ್ರಮಾಂಕದಲ್ಲಿ ಬಂದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಸ್ವಲ್ಪದರಲ್ಲೇ ಶೂನ್ಯಕ್ಕೆ ಔಟಾಗುವುದರಿಂದ ಪಾರಾಗಿದ್ದಾರೆ.

ಮೊದಲ ಎಸೆತದಲ್ಲೇ ಕ್ಯಾಚ್ ನೀಡಿದ ಕೊಹ್ಲಿ

ವಾಸ್ತವವಾಗಿ, ಜೈಸ್ವಾಲ್ ವಿಕೆಟ್ ಪತನದ ನಂತರ ವಿರಾಟ್ ಕೊಹ್ಲಿ ಕ್ರೀಸ್‌ಗೆ ಕಾಲಿಟ್ಟರು. ಈ ವೇಳೆ ಆಸೀಸ್ ಪರ ಸ್ಕಾಟ್ ಬೋಲ್ಯಾಂಡ್ ಬೌಲಿಂಗ್ ಮಾಡುತ್ತಿದ್ದರು. ಇಡೀ ಸರಣಿಯಲ್ಲಿ ಕೊಹ್ಲಿಗೆ ತೊಂದರೆ ನೀಡಿದ ಬೌಲರ್​ಗಳಲ್ಲಿ ಸ್ಕಾಟ್ ಬೋಲ್ಯಾಂಡ್ ಕೂಡ ಒಬ್ಬರು. ಹೀಗಾಗಿ ಮೊದಲ ಎಸೆತದಲ್ಲೇ ಕೊಹ್ಲಿ ವಿಕೆಟ್ ಉರುಳಿಸುವ ಇರಾದೆಯಲ್ಲಿ ಬೋಲ್ಯಾಂಡ್ ಗುಡ್ ಲೆಂಗ್ತ್ ಎಸೆತವನ್ನು ಬೌಲ್ ಮಾಡಿದರು. ಈ ವೇಳೆ ವಿರಾಟ್ ಕೊಹ್ಲಿ ಮೊದಲ ಎಸೆತವನ್ನು ಡಿಫೆಂಡ್ ಮಾಡುವ ಯತ್ನದಲ್ಲಿ ಸ್ಲಿಪ್‌ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್​ಗೆ ಕ್ಯಾಚ್ ನೀಡಿದರು. ಇತ್ತ ಕ್ಯಾಚ್ ಹಿಡಿದ ಸ್ಮಿತ್ ಸಂಭ್ರಮಿಸಲು ಪ್ರಾರಂಭಿಸಿದರು.

ಇತ್ತ ಆಸೀಸ್ ಆಟಗಾರರು ಕೂಡ ಮೈದಾನದಲ್ಲಿ ಸಂಭ್ರಮಾಚರಣೆ ನಡೆಸಲಾರಂಭಿಸಿದರು. ಆದರೆ ರಿವ್ಯೂವ್​ನಲ್ಲಿ ನೋಡಿದಾಗ ಸ್ಮಿತ್ ಕ್ಯಾಚ್ ತೆಗೆದುಕೊಳ್ಳುವ ಸಮಯದಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಮೂರನೇ ಅಂಪೈರ್ ಜೋ ವಿಲ್ಸನ್ ನಿರ್ಧಾರ ತೆಗೆದುಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಂಡರು. ಅಂತಿಮವಾಗಿ ಫಲಿತಾಂಶವು ವಿರಾಟ್ ಪರವಾಗಿ ಬಂದಿತು. ಈ ಮೂಲಕ ವಿರಾಟ್ ಕೊಹ್ಲಿ ಸರಣಿಯಲ್ಲಿ ಗೋಲ್ಡನ್ ಡಕ್‌ಗೆ ಔಟಾಗುವುದರಿಂದ ಪಾರಾಗಿದ್ದಾರೆ. ಪ್ರಸ್ತುತ ಕೊಹ್ಲಿಯ ಪ್ರದರ್ಶನ ತೀರಾ ಕಳಪೆಯಾಗಿದ್ದು, ಈಗ ಮೊದಲ ಎಸೆತದಲ್ಲೇ ಅವರು ಔಟಾಗಿದ್ದರೆ ಗಾಯಕ್ಕೆ ಉಪ್ಪು ಸವರಿದಂತಾಗುತ್ತಿತ್ತು.

ಟೀಂ ಇಂಡಿಯಾ ಕೆಟ್ಟ ಆರಂಭ

ಸಿಡ್ನಿ ಟೆಸ್ಟ್‌ನಲ್ಲಿ ಟೀಂ ಇಂಡಿಯಾ ಕೆಟ್ಟ ಆರಂಭ ಪಡೆದುಕೊಂಡಿದೆ. ಐದನೇ ಓವರ್​ನಲ್ಲಿ ಸ್ಟಾರ್ಕ್​ಗೆ ಬಲಿಯಾದ ಕೆಎಲ್ ರಾಹುಲ್ ರೂಪದಲ್ಲಿ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಬೋಲ್ಯಾಂಡ್ ಟೀಂ ಇಂಡಿಯಾಗೆ ಎರಡನೇ ಹಾಗೂ ಅತಿ ದೊಡ್ಡ ಹೊಡೆತ ನೀಡಿದರು. ಈ ಬಲಗೈ ವೇಗಿ ಮತ್ತೊಮ್ಮೆ ಆಸ್ಟ್ರೇಲಿಯಾಕ್ಕೆ ತನ್ನ ಮೊದಲ ಓವರ್‌ನಲ್ಲೇ ಯಶಸ್ಸು ತಂದುಕೊಟ್ಟರು. ಬೋಲ್ಯಾಂಡ್ 10 ರನ್​ಗಳ ವೈಯಕ್ತಿಕ ಸ್ಕೋರ್​ನಲ್ಲಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು.