AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು, ಐಷಾರಾಮಿ ಪರ್​ಫ್ಯೂಮ್​ ಬಾಟಲಿಗಳು!

ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು, ಐಷಾರಾಮಿ ಪರ್​ಫ್ಯೂಮ್​ ಬಾಟಲಿಗಳು!

ಸುಷ್ಮಾ ಚಕ್ರೆ
|

Updated on: Oct 15, 2026 | 6:38 PM

Share

ಸಿಂಗಾಪುರ ಧ್ವಜವನ್ನು ಹೊಂದಿದ್ದ 'ಜಿಎಫ್‌ಎಸ್ ಪ್ರೈಡ್' ಕಂಟೈನರ್ ಹಡಗು 2,500ಕ್ಕೂ ಅಧಿಕ ಕಂಟೈನರ್‌ಗಳನ್ನು ಹೊತ್ತುಕೊಂಡು ಸಾಗುತ್ತಿದ್ದ ವೇಳೆ ಹಾರ್ಮುಜ್ ಜಲಸಂಧಿ ಬಳಿ ಮುಳುಗಿದೆ. ಹಡಗು ಜಲಸಮಾಧಿಯಾಗುವ ಮುನ್ನ ಅದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಅದರಲ್ಲಿದ್ದ ಎಲ್ಲಾ 21 ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಹಡಗು ಮುಳುಗಿದ ರಭಸಕ್ಕೆ ಅದರಲ್ಲಿದ್ದ ದುಬಾರಿ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಐಫೋನ್ ಬಾಕ್ಸ್‌ಗಳು ಹಾಗೂ ಖ್ಯಾತ ಬ್ರ್ಯಾಂಡ್‌ಗಳ ಐಷಾರಾಮಿ ಸುಗಂಧ ದ್ರವ್ಯದ ಬಾಟಲಿಗಳು ಸಮುದ್ರದ ನೀರಿನಲ್ಲಿ ತೇಲಾಡಲು ಆರಂಭಿಸಿವೆ. ಸ್ಥಳೀಯ ಮೀನುಗಾರರು ಮತ್ತು ಜನರು ಬೋಟ್‌ಗಳಲ್ಲಿ ತೆರಳಿ, ನೀರಿನಲ್ಲಿ ತೇಲುತ್ತಿದ್ದ ಈ ಬೆಲೆಬಾಳುವ ವಸ್ತುಗಳನ್ನು ಹೆಕ್ಕಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

ಟೆಹ್ರಾನ್, ಅಕ್ಟೋಬರ್ 15: ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಸರಕು ಸಾಗಣೆ ಹಡಗು ಮುಳುಗಡೆಯಾಗಿದ್ದು, ನೌಕೆಯಲ್ಲಿದ್ದ ಬೆಲೆಬಾಳುವ ಐಫೋನ್‌ಗಳು ಮತ್ತು ಐಷಾರಾಮಿ ಪರ್ಫ್ಯೂಮ್ ಬಾಟಲಿಗಳು ಸಮುದ್ರದಲ್ಲಿ ನೀರಿನ ಮೇಲೆ ತೇಲಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸಿಂಗಾಪುರ ಧ್ವಜವನ್ನು ಹೊಂದಿದ್ದ ‘ಜಿಎಫ್‌ಎಸ್ ಪ್ರೈಡ್’ ಕಂಟೈನರ್ ಹಡಗು 2,500ಕ್ಕೂ ಅಧಿಕ ಕಂಟೈನರ್‌ಗಳನ್ನು ಹೊತ್ತುಕೊಂಡು ಸಾಗುತ್ತಿದ್ದ ವೇಳೆ ಹಾರ್ಮುಜ್ ಜಲಸಂಧಿ ಬಳಿ ಮುಳುಗಿದೆ. ಹಡಗು ಜಲಸಮಾಧಿಯಾಗುವ ಮುನ್ನ ಅದರಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಅದರಲ್ಲಿದ್ದ ಎಲ್ಲಾ 21 ಸಿಬ್ಬಂದಿಯನ್ನು ರಕ್ಷಿಸಲಾಗಿದೆ.

ಹಡಗು ಮುಳುಗಿದ ರಭಸಕ್ಕೆ ಅದರಲ್ಲಿದ್ದ ದುಬಾರಿ ಎಲೆಕ್ಟ್ರಾನಿಕ್ಸ್‌ ವಸ್ತುಗಳು, ಐಫೋನ್ ಬಾಕ್ಸ್‌ಗಳು ಹಾಗೂ ಖ್ಯಾತ ಬ್ರ್ಯಾಂಡ್‌ಗಳ ಐಷಾರಾಮಿ ಸುಗಂಧ ದ್ರವ್ಯದ ಬಾಟಲಿಗಳು ಸಮುದ್ರದ ನೀರಿನಲ್ಲಿ ತೇಲಾಡಲು ಆರಂಭಿಸಿವೆ. ಸ್ಥಳೀಯ ಮೀನುಗಾರರು ಮತ್ತು ಜನರು ಬೋಟ್‌ಗಳಲ್ಲಿ ತೆರಳಿ, ನೀರಿನಲ್ಲಿ ತೇಲುತ್ತಿದ್ದ ಈ ಬೆಲೆಬಾಳುವ ವಸ್ತುಗಳನ್ನು ಹೆಕ್ಕಿಕೊಳ್ಳುತ್ತಿರುವ ವಿಡಿಯೋಗಳು ವೈರಲ್ ಆಗಿವೆ.

 

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More