AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಧೋನಿ ಮಾತಿಗೆ ಬೆಲೆನೇ ಇಲ್ಲ... ಮೈದಾನದಲ್ಲೇ CSK ನಾಯಕ ಗರಂ

VIDEO: ಧೋನಿ ಮಾತಿಗೆ ಬೆಲೆನೇ ಇಲ್ಲ… ಮೈದಾನದಲ್ಲೇ CSK ನಾಯಕ ಗರಂ

ಝಾಹಿರ್ ಯೂಸುಫ್
|

Updated on: May 26, 2025 | 8:53 AM

Share

IPL 2025 CSK vs GT: ಇಂಡಿಯನ್ ಪ್ರೀಮಿಯರ್ ಲೀಗ್​ನ 67ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 230 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 147 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಸಿಎಸ್​ಕೆ ತಂಡ 83 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಮಹೇಂದ್ರ ಸಿಂಗ್ ಧೋನಿಯ ಮಾತಿಗೆ ಮನ್ನಣೆ ನೀಡುತ್ತಿಲ್ವಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಸಿಎಸ್​ಕೆ ಆಟಗಾರರ ವರ್ತನೆ. ಏಕೆಂದರೆ ಅಹಮದಾಬಾದ್​ನಲ್ಲಿ ನಡೆದ ಈ ಪಂದ್ಯದ ವೇಳೆ ಧೋನಿ ಫೀಲ್ಡಿಂಗ್​ ನಿಲ್ಲಿಸಿದ ಕಡೆ ಸಿಎಸ್​ಕೆ ತಂಡ ಆಟಗಾರರು ನಿಲ್ಲುತ್ತಿರಲಿಲ್ಲ.

ಧೋನಿ ಸೂಚಿಸಿದ ಭಾಗಗಳಲ್ಲಿ ಫೀಲ್ಡಿಂಗ್ ನಿಲ್ಲಲು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಆಸಕ್ತಿ ತೋರದಿರುವುದು ಕಂಡು ಬಂದಿದೆ. ಇತ್ತ ಆಟಗಾರರ ನಿರ್ಲಕ್ಷ್ಯದಿಂದಾಗಿ ಖುದ್ದು ಧೋನಿ ಕೂಡ ತಮ್ಮ ಸಹನೆ ಕಳೆದುಕೊಂಡರು. ಅಲ್ಲದೆ ಮೈದಾನದಲ್ಲೇ ತನ್ನ ಅಸಮಾಧಾನವನ್ನು ತೋರ್ಪಡಿಸುತ್ತಿರುವುದು ಕಂಡು ಬಂದಿದೆ. ಇದೀಗ ಮೈದಾನದಲ್ಲಿ ಅಸಹಾಯಕತೆಯಿಂದ ವರ್ತಿಸುತ್ತಿರುವ ಧೋನಿಯ ವಿಡಿಯೋ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 20 ಓವರ್​ಗಳಲ್ಲಿ 230 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಕೇವಲ 147 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಸಿಎಸ್​ಕೆ ತಂಡ 83 ರನ್​ಗಳ ಭರ್ಜರಿ ಜಯ ಸಾಧಿಸಿದೆ.