AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

DC vs GT: ಕೊನೆಗೂ ಅಬ್ಬರಿಸಿದ ಕೆಎಲ್ ರಾಹುಲ್; ಸಿಡಿಯಿತು 41ನೇ ಅರ್ಧಶತಕ

DC vs GT: ಕೊನೆಗೂ ಅಬ್ಬರಿಸಿದ ಕೆಎಲ್ ರಾಹುಲ್; ಸಿಡಿಯಿತು 41ನೇ ಅರ್ಧಶತಕ

ಪೃಥ್ವಿಶಂಕರ
|

Updated on: Apr 08, 2026 | 10:46 PM

Share

KL Rahul's Explosive IPL 2026 Half-Century: ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ 2026ರ ಪಂದ್ಯದಲ್ಲಿ ಕೆಎಲ್ ರಾಹುಲ್ ಗುಜರಾತ್ ಟೈಟಾನ್ಸ್ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ಕೇವಲ 29 ಎಸೆತಗಳಲ್ಲಿ ತಮ್ಮ 41ನೇ ಐಪಿಎಲ್ ಅರ್ಧಶತಕ ಪೂರೈಸಿದ ರಾಹುಲ್​ಗೆ ಇದು ಅವರ ಈ ಸೀಸನ್‌ನ ಮೊದಲ ಅರ್ಧಶತಕವಾಗಿದ್ದು, ತಂಡಕ್ಕೆ ನಿರ್ಣಾಯಕ ಕೊಡುಗೆಯಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಐಪಿಎಲ್ 2026 ರ 14ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್ 211 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಪರ ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಈ ಸೀಸನ್​ನಲ್ಲಿ ಇದು ರಾಹುಲ್ ಅವರ ಮೊದಲ ಅರ್ಧಶತಕವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ ರಾಹುಲ್, ಲೀಗ್​ನ ಮೂರನೇ ಪಂದ್ಯದಲ್ಲಿ ಲಯ ಕಂಡುಕೊಂಡು ಕೇವಲ 29 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದು ರಾಹುಲ್ ಅವರ ಐಪಿಎಲ್ ವೃತ್ತಿಜೀವನದ 41ನೇ ಅರ್ಧಶತಕವಾಗಿದೆ. ರಾಹುಲ್ ಅವರ ಈ ಅರ್ಧಶತಕದಿಂದಾಗಿ ಡೆಲ್ಲಿ ತಂಡ ಸತತ ಮೂರನೇ ಗೆಲುವಿನತ್ತ ಸಾಗುತ್ತಿದೆ.

Follow Us