AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL: ಅಪ್ಪಿತಪ್ಪಿಯೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಸೆಕ್ಯುರಿಟಿ ಬಗ್ಗೆ ಕಮಿಷನರ್​ ಹೇಳಿದ್ದಿಷ್ಟು

IPL: ಅಪ್ಪಿತಪ್ಪಿಯೂ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಬರ್ಬೇಡಿ; ಸೆಕ್ಯುರಿಟಿ ಬಗ್ಗೆ ಕಮಿಷನರ್​ ಹೇಳಿದ್ದಿಷ್ಟು

Shivaraj
| Edited By: |

Updated on: Mar 27, 2026 | 7:54 PM

Share

ಚಿನ್ನಸ್ವಾಮಿ ಮೈದಾನದಲ್ಲಿ ನಾಳೆ IPL ಉದ್ಘಾಟನಾ ಪಂದ್ಯ ನಡೆಯಲಿದೆ. ಈ ಬಗ್ಗೆ ಬೆಂಗಳೂರು ಕಮಿಷನರ್ ಸೀಮಂತ್ ಕುಮಾರ್ ಮಾತನಾಡಿದ್ದು, ಟಿಕೆಟ್ ಇದ್ದವರು ಮಾತ್ರ ಆಗಮಿಸಬೇಕು, ರಸ್ತೆಯಲ್ಲಿ ನಿಲ್ಲುವಂತಿಲ್ಲ. ಪಾರ್ಕಿಂಗ್ ಅವಕಾಶವಿಲ್ಲ, ಮೂರು ಹಂತದ ಭದ್ರತೆ ಇರಲಿದೆ. ಆಫ್‌ಲೈನ್ ಟಿಕೆಟ್ ಸಿಗುವುದಿಲ್ಲ. ಟಿಕೆಟ್ ಇಲ್ಲದವರು ಮನೆಯಲ್ಲಿಯೇ ವೀಕ್ಷಿಸುವಂತೆ ಹೇಳಿದ್ದಾರೆ.

ಬೆಂಗಳೂರು, ಮಾರ್ಚ್​ 27: ಕ್ರಿಕೆಟ್ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಾಳೆ IPL ಉದ್ಘಾಟನಾ ಪಂದ್ಯ ನಡೆಯಲಿದೆ. ಸಕಲ ಭದ್ರತೆ ಕೂಡ ಕೈಗೊಳ್ಳಲಾಗಿದೆ. ಈ ಬಗ್ಗೆ ಬೆಂಗಳೂರು ಕಮಿಷನರ್​ ಸೀಮಂತ್ ಕುಮಾರ್​ ಪ್ರತಿಕ್ರಿಯಿಸಿದ್ದು, ಚಿನ್ನಸ್ವಾಮಿ ಸ್ಟೇಡಿಯಂ ಬಳಿ 3 ಹಂತದ ಸೆಕ್ಯುರಿಟಿ ಇರಲಿದೆ. ಆರ್​ಎಎಫ್​​ ಮತ್ತು ಗರುಡ ಟೀಂ, ಪಿಕಪ್ ಸ್ಕ್ವಾಡ್ ಇದೆ. ಭದ್ರತೆಗೆ 2,500 ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿದೆ. ಆಫ್​ಲೈನ್ ಟಿಕೆಟ್ ಸಿಗುತ್ತೆ ಎಂದು ಯಾರು ಬರಬಾರದು. ಮೈದಾನ ಬಳಿ ರಸ್ತೆಗೆ ಬಂದು ನಿಲ್ಲುವವರಿಗೆ ಅವಕಾಶ ನೀಡಲ್ಲ. ಟಿಕೆಟ್ ಇಲ್ಲದಿದ್ದರೆ ಮನೆಯಲ್ಲಿ ಕುಳಿತು ಪಂದ್ಯವನ್ನ ನೋಡಿ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us
Shivaraj
Shivaraj