AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ವಿರಾಟ್ ಕೊಹ್ಲಿ..! ಯುವತಿಯ ಸ್ಫೋಟಕ ವಿಡಿಯೋ ವೈರಲ್

ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ತಂದೆ ವಿರಾಟ್ ಕೊಹ್ಲಿ..! ಯುವತಿಯ ಸ್ಫೋಟಕ ವಿಡಿಯೋ ವೈರಲ್

ಪೃಥ್ವಿಶಂಕರ
|

Updated on:Mar 28, 2026 | 4:02 PM

Share

Virat Kohli Paternity Claim:2026ರ ಐಪಿಎಲ್ ಆರಂಭಕ್ಕೂ ಮುನ್ನ ವಿರಾಟ್ ಕೊಹ್ಲಿ ಕುರಿತು ತೆಲುಗು ಮೂಲದ ಯುವತಿಯೊಬ್ಬಳು ಸ್ಫೋಟಕ ಹೇಳಿಕೆ ನೀಡಿ ವಿಡಿಯೋ ವೈರಲ್ ಆಗಿದೆ. 'cricminaati' ಖಾತೆಯಿಂದ, ವಿರಾಟ್ ತಮ್ಮ ಮಗುವಿಗೆ ತಂದೆ ಎಂದು ಮಹಿಳೆ ಆರೋಪಿಸಿದ್ದಾಳೆ. ಈ ಹೇಳಿಕೆಯ ಸತ್ಯಾಸತ್ಯತೆ ಅರಿವಿಲ್ಲದಿದ್ದರೂ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಕೊಹ್ಲಿ ಅಭಿಮಾನಿಗಳು ಈ ವಿಡಿಯೋವನ್ನು ಖಂಡಿಸಿದ್ದಾರೆ.

2026 ರ ಐಪಿಎಲ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಲೀಗ್​ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು ಬೆಂಗಳೂರಿನಲ್ಲಿ ಎದುರಿಸುತ್ತಿದೆ. ತವರಿನ ಅಭಿಮಾನಿಗಳ ಮುಂದೆ ಅಬ್ಬರಿಸಲು ಆರ್​ಸಿಬಿಯ ಜೀವಾಳ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಕೂಡ ಸರ್ವ ಸನ್ನದ್ಧರಾಗಿದ್ದಾರೆ. ಅಭಿಮಾನಿಗಳು ಕೂಡ ಅವರ ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದೆಲ್ಲದರ ನಡುವೆ ತೆಲುಗು ಮೂಲದ ಯುವತಿಯೊಬ್ಬಳು ವಿರಾಟ್ ಕೊಹ್ಲಿಗೆ ಸಂಬಂಧಿಸಿದಂತೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾಳೆ.

ಇನ್​ಸ್ಟಾಗ್ರಾಮ್​ನಲ್ಲಿ ‘cricminaati’ ಎಂಬ ಹೆಸರಿನ ಖಾತೆ ಹೊಂದಿರುವ ಮಹಿಳೆಯೊಬ್ಬರು ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ‘ವಿರಾಟ್ ಕೊಹ್ಲಿ ನನಗೆ ಲವ್ ಬೈಟ್ ನೀಡಿದ್ದರು ಎಂದು ಹೇಳಿದನ್ನು ನಿವ್ಯಾರು ನಂಬಿರಲಿಲ್ಲ. ಎಲ್ಲರೂ ನನ್ನನ್ನು ಟ್ರೋಲ್ ಮಾಡಿದ್ದರು. ಆದರೀಗ ನೀವು ನಂಬುವಂತಹ ಸಾಕ್ಷಿಯೊಂದನ್ನು ತಂದಿದ್ದೇನೆ. ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗೆ ವಿರಾಟ್ ಕೊಹ್ಲಿಯೇ ತಂದೆ.ಇದನ್ನು ಫೇಕ್ ಮಾಡಲು ಸಾಧ್ಯ ಇಲ್ಲ ಅಲ್ವ? ನಾನು ವಿರಾಟ್ ಕೊಹ್ಲಿ ಬಗ್ಗೆ ಮಾಡಲಿರುವ ಎಲ್ಲಾ ವಿಡಿಯೋಗಳನ್ನು ನೀವು ನೋಡಬೇಕು. ಅಂದಹಾಗೆ ಇಂದು ಆರ್​ಸಿಬಿ ಮತ್ತು ಎಸ್​ಆರ್​ಹೆಚ್ ನಡುವೆ ಪಂದ್ಯವಿದೆ ಅಲ್ವ? ಆ ಪಂದ್ಯದಲ್ಲಿ ಆರ್​ಸಿಬಿ ಗೆಲ್ಲುತ್ತೆ’ ಎಂದಿದ್ದಾರೆ. ಪ್ರಸ್ತುತ ಈ ಯುವತಿಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಸಾಕಷ್ಟು ವೈರಲ್ ಆಗುತ್ತಿದೆ.

ಆದರೆ ಈ ಯುವತಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದನ್ನು ಹೇಳಲು ಅಸಾಧ್ಯ. ಏಕೆಂದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಸಲುವಾಗಿ ಕೆಲವರು ಈ ರೀತಿಯ ಮಾರ್ಗಗಳನ್ನು ಬಳಸುತ್ತಾರೆ. ಪ್ರಸಿದ್ಧ ವ್ಯಕ್ತಿಗಳ ಜೊತೆ ನನಗೆ ನಂಟಿದೆ ಎಂದು ಹೇಳಿಕೊಳ್ಳುವ ಮೂಲಕ ಅವರು ವೈರಲ್ ಆಗಲು ಬಯುತ್ತಾರೆ. ಅಂತಹವರ ಸಾಲಿಗೆ ಈ ಯುವತಿಯೂ ಸೇರಿರಬಹುದು ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ. ಈ ವಿಡಿಯೋ ವೈರಲ್ ಆದ ಬಳಿಕ ಕೊಹ್ಲಿ ಅಭಿಮಾನಿಗಳು ಈ ಯುವತಿಯ ವಿರುದ್ಧ ಕೆಂಡಕಾರಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Mar 28, 2026 03:55 PM
Follow Us