Loading video

ಚುನಾವಣೆ ಸಮಯದಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದು ನಾನಲ್ಲ: ಹೆಚ್ ಡಿ ಕುಮಾರಸ್ವಾಮಿ

Updated on: Jul 05, 2025 | 2:20 PM

ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಜಾರಿಗೆ ತರೋದಾಗಿ ಕುಮಾರಸ್ವಾಮಿ ಸಹ ಹೇಳಿದ್ದರು. ತನ್ನ ಮಾತಿಗೆ ಈಗಲೂ ಬದ್ಧ ಎಂದು ಹೇಳುವ ಅವರು ಆಣೆಕಟ್ಟು ಕಟ್ಟಲು ತಮಿಳುನಾಡುನಿಂದ ಅನುಮೋದನೆಯನ್ನು ಕಾಂಗ್ರೆಸ್ ಪಡೆದುಕೊಂಡರೆ ತಾನು ಕೇಂದ್ರ ಸರ್ಕಾರದಿಂದ ಐದು ನಿಮಿಷಗಳಲ್ಲಿ ಕ್ಲೀಯರನ್ಸ್ ಕೊಡಿಸುತ್ತೇನೆ ಎಂದು ಕೇಂದ್ರ ಸಚಿವ ಹೇಳಿದರು.

ಮೈಸೂರು, ಜುಲೈ 5: ಮೇಕೆದಾಟು ಯೋಜನೆಯನ್ನು ಜಾರಿಗೆ ತರುತ್ತೇವೆ ಅಂತ ಜನರನ್ನು ನಂಬಿಸಿ ಅಧಿಕಾರಕ್ಕೆ ಬಂದಿದ್ದು ತಾನಲ್ಲ ಕಾಂಗ್ರೆಸ್ ಪಕ್ಷದ ನಾಯಕರು; ಪಕ್ಕದ ತಮಿಳುನಾಡುನಲ್ಲಿ ಅವರ ಮಿತ್ರಪಕ್ಷವೇ ಅಧಿಕಾರದಲ್ಲಿದೆ, ಸಿದ್ದರಾಮಯ್ಯ ಸರ್ಕಾರ ಎಂಕೆ ಸ್ಟಾಲಿನ್ ಸರ್ಕಾರಕ್ಕೆ ಮನವರಿಕೆ ಮಾಡಿಸಿದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಂದ ಯೋಜನೆಗೆ ಅನುಮತಿ ಕೊಡಿಸುವುದು ತನಗೆ ಕಷ್ಟವಾಗಲಾರದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಕರ್ನಾಟಕದ ಸಿಎಂ, ಡಿಸಿಎಂ ಬೇರೆ ಬೇರೆ ಕೆಲಸಗಳಿಗೆ ಅಂತ ತಮಿಳುನಾಡುಗೆ ಹತ್ತಾರು ಸಲ ಹೋಗುತ್ತಾರೆ, ಮೇಕೆದಾಟು ಯೋಜನೆಯನ್ನು ಚರ್ಚಿಸಿ ಅವರನ್ನು ಒಪ್ಪಿಸಲು ಏನು ಧಾಡಿ ಎಂದು ಕುಮಾರಸ್ವಾಮಿ ಹೇಳಿದರು

ಇದನ್ನೂ ಓದಿ: ಜನರೊಂದಿಗೆ ಜನತಾದಳ ಕಾರ್ಯಕ್ರಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ತರುತ್ತಿದೆ: ನಿಖಿಲ್ ಕುಮಾರಸ್ವಾಮಿ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ