ಇದು ಜಾತಿ ಗಣತಿ ಅಲ್ಲ; ಬಡವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ: ಶಿವರಾಜ ತಂಗಡಿಗಿ

Updated on: Apr 17, 2025 | 12:15 PM

ಬಿಜೆಪಿಯ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ ಸಚಿವ ತಂಗಡಿಗಿ, ಅವರ ಬಗ್ಗೆ ಏನು ಮಾತಾಡೋದು, ಅವರೇ ಮಾತಾಡೋದನ್ನು ಬಿಟ್ಟು ಮೌನಕ್ಕೆ ಶರಣಾಗಿದ್ದಾರೆ, ಬಿಜೆಪಿಯ ಕತೆ ಮನೆಯೊಂದು ಬಾಗಿಲು ಮೂವತ್ತಾರು ಥರ ಆಗಿದೆ ಎಂದು ಹೇಳಿದರು.

ಕೊಪ್ಪಳ, ಏಪ್ರಿಲ್ 17: ಮುಖ್ಯಮಂತ್ರಿಯಾದಿ ಆಗಿ ಕಾಂಗ್ರೆಸ್ ಮಂತ್ರಿಗಳೆಲ್ಲ ಜಾತಿ ಗಣತಿ ವರದಿಯನ್ನು (Caste Census Report) ಬಡವರ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಎಂದು ಹೇಳುತ್ತಿದ್ದಾರೆ. ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಸಚಿವ ಶಿವರಾಜ ತಂಗಡಿಗಿ, ರಾಜ್ಯದಲ್ಲಿ ಈಗ ಚರ್ಚೆಯಾಗುತ್ತಿರುವುದು ಜಾತಿ ಗಣತಿ ವರದಿ ಅಲ್ಲವೇ ಅಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರಿಗೆ ಯೋಜನೆಗಳನ್ನು ಹಂಚಲು ಅವರ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಮಾಡಿಸಿರುವ ಸಮೀಕ್ಷೆ ಎಂದು ಹೇಳಿದರು. ಮಾಧ್ಯಮದವರು ಇದನ್ನು ಸಮೀಕ್ಷೆಯೆಂದು ಬಿತ್ತರಿಸಬೇಕೆಂದು ಅವರ ವಿನಂತಿಸಿಕೊಂಡರು.

ಇದನ್ನೂ ಓದಿ:  ಬಸನಗೌಡ ಯತ್ನಾಳ್​​ರನ್ನು ಉಚ್ಚಾಟಿಸಿ ಬಿಜೆಪಿ ಲಿಂಗಾಯತ ಸಮುದಾಯಕ್ಕೆ ಕೆಟ್ಟ ಸಂದೇಶ ನೀಡಿದೆ: ಶಿವರಾಜ ತಂಗಡಿಗಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ