Karnataka Budget Session: ರಾಜ್ಯದಲ್ಲಿ ಜೈನ್ ಸಮುದಾಯದವರು 20 ಲಕ್ಷಕ್ಕೂ ಹೆಚ್ಚಿದ್ದಾರೆ, ಅವರಿಗೊಂದು ನಿಗಮ ಬೇಕು: ಜಮೀರ್ ಅಹ್ಮದ್

Updated on: Mar 10, 2025 | 12:36 PM

ಜೈನ್ ಸಮಾಜದ್ದಾಯಿತು, ಬ್ಯಾರಿ ಸಮಾಜದ ಕತೆ ಏನು, ಆ ಸಮುದಾಯಕ್ಕೊಂದು ನಿಗಮ ಬೇಡವೇ ಎಂದು ಸ್ಪೀಕರ್ ಯುಟಿ ಖಾದರ್ ಕೇಳಿದಾಗ ಸಚಿವ ಜಮೀರ್ ಅಹ್ಮದ್ ತಬ್ಬಿಬ್ಬಾಗುತ್ತಾರೆ. ಪ್ರಾಯಶಃ ಬ್ಯಾರಿ ಸಮಾಜವೊಂದಿದೆ ಅಂತ ಅವರಿಗೆ ಗೊತ್ತಿರಲಿಕ್ಕಿಲ್ಲ. ನಂತರ ಸಚಿವ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಗ್ವಾದ ನಡೆಯುತ್ತದೆ.

ಬೆಂಗಳೂರು, ಮಾರ್ಚ್ 10: ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಜೈನ್ ಸಮುದಾಯದ ಬಗ್ಗೆ ಮಾಹಿತಿ ನೀಡಿದರು. ಸಚಿವ ಅಲ್ಪಸಂಖ್ಯಾತರ ಕಲ್ಯಾಣ ಖಾತೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ಸರ್ವೇಯೊಂದನ್ನು ಮಾಡಿಸಿದ್ದು ಅದರ ಪ್ರಕಾರ ರಾಜ್ಯದಲ್ಲಿ ಜೈನ್ ಸಮುದಾಯದ ಜನಸಂಖ್ಯೆ 20 ಲಕ್ಷಕ್ಕೂ ಹೆಚ್ಚಿದೆ, ಆ ಸಮುದಾಯಕ್ಕಾಗೇ ಪ್ರತ್ಯೇಕ ನಿಗಮವೊಂದನ್ನು ಸ್ಥಾಪಿಸುವ ಅವಶ್ಯಕತೆಯಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಚುನಾವಣಾ ಸಮಯದಲ್ಲಿ ಮನೆ ನೀಡುವ ಭರವಸೆ ನೀಡಿರಲಿಲ್ಲ, ಅದರೂ ಬಡವರಿಗೆ ಮನೆ ನೀಡಿದ್ದೇವೆ: ಜಮೀರ್ ಅಹ್ಮದ್