ಜಲ್ಲಿಕಟ್ಟು ಸ್ಪರ್ಧೆ ವೇಳೆ ಜನರ ಮೇಲೆರಗಿದ ಗೂಳಿ: 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

Edited By:

Updated on: Mar 10, 2025 | 5:39 PM

ತಮಿಳುನಾಡಿನ ಹೊಸೂರಿನಲ್ಲಿ ನಡೆದ ಜಲ್ಲಿಕಟ್ಟು ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಜನರು ಗೂಳಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಾಯಕಾರಿ ಕ್ರೀಡೆಯನ್ನು ಕರ್ನಾಟಕದಲ್ಲಿ ನಿಷೇಧಿಸಲಾಗಿದೆ, ಆದರೆ ತಮಿಳುನಾಡಿನಲ್ಲಿ ಇದು ಜನಪ್ರಿಯವಾಗಿದೆ. 500ಕ್ಕೂ ಹೆಚ್ಚು ಗೂಳಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಆನೇಕಲ್​, ಮಾರ್ಚ್ 10: ಜಲ್ಲಿಕಟ್ಟು (Jallikattu) ಸ್ಪರ್ಧೆ ವೇಳೆ ಅವಘಡ ಸಂಭವಿಸಿದ್ದು, ಗೂಳಿಗಳ ದಾಳಿಯಿಂದ 30ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿರುವಂತಹ ಘಟನೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಹೊಸೂರು ಬಳಿಯ ಮಲ್ಲಿಕಾರ್ಜುನ ದುರ್ಗಂ ಗ್ರಾಮದ ಬಳಿ ನಡೆದಿದೆ. ಗಾಯಗೊಂಡ 30ಕ್ಕೂ ಅಧಿಕ ಜನರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.