ಬಕ್ರೀದ್‌ ಶಾಂತಿ ಸಭೆಯಲ್ಲಿ ಪೊಲೀಸ್ರ ಮುಂದೇ ರೆಡ್ಡಿ, ಅನ್ಸಾರಿ ಬಣ ಜಟಾಪಟಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 14, 2024 | 10:10 PM

ಠಾಣೆಯಲ್ಲಿ ಪೊಲೀಸರ ಮುಂದೆ ಎರಡು ಬಣಗಳ ನಡುವೆ ವಾಗ್ವಾದ ನಡೆದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದಿದೆ. ಗಂಗಾವತಿ ಪಟ್ಟಣದಲ್ಲಿರುವ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಇಂದು(ಜೂ.14) ಗಂಗಾವತಿ ಪೊಲೀಸರು ಬಕ್ರೀದ್ ಹಬ್ಬದ ಆಂಗವಾಗಿ ಪೂರ್ವಭಾವಿ ಶಾಂತಿ ಸಭೆ ಕರೆದಿದ್ದರು. ಆದರೆ ಪೂರ್ವಭಾವಿ ಶಾಂತಿ ಸಭೆ ಎರಡು ಬಣಗಳ ತಿಕ್ಕಾಟಕ್ಕೆ ಸಾಕ್ಷಿಯಾಯಿತು.

ಕೊಪ್ಪಳ, ಜೂ.14: ಕೊಪ್ಪಳ ಜಿಲ್ಲೆಯ ಗಂಗಾವತಿ(Gangavathi) ಪಟ್ಟಣದಲ್ಲಿ ಎರಡು ಬಣಗಳ ನಡುವೆ ವಾಗ್ವಾದ ನಡೆದಿದೆ. ಗಂಗಾವತಿ ಪಟ್ಟಣದಲ್ಲಿರುವ ಡಿವೈಎಸ್ಪಿ ಕಚೇರಿ ಆವರಣದಲ್ಲಿ ಇಂದು(ಜೂ.14) ಗಂಗಾವತಿ ಪೊಲೀಸರು ಬಕ್ರೀದ್ ಹಬ್ಬದ ಆಂಗವಾಗಿ ಪೂರ್ವಭಾವಿ ಶಾಂತಿ ಸಭೆ ಕರೆದಿದ್ದರು. ಆದರೆ, ಪೂರ್ವಭಾವಿ ಶಾಂತಿ ಸಭೆ ಎರಡು ಬಣಗಳ ತಿಕ್ಕಾಟಕ್ಕೆ ಸಾಕ್ಷಿಯಾಯಿತು. ಸಭೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರ ನಡುವೆ ಪೊಲೀಸರ ಮುಂದೆಯೇ ವಾಗ್ವಾದ ನಡೆಯಿತು. ಶಾಸಕ ಜನಾರ್ದನ ರೆಡ್ಡಿ ಆಪ್ತ ಅಲಿಖಾನ ಮಾತಿಗೆ ಇಕ್ಬಾಲ್ ಅನ್ಸಾರಿ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ನಮಾಜ್​ಗೆ ನಿಗದಿ ಮಾಡಿರೋ ಸಮಯ ಮತ್ತು ಭಾಷಣದ ಬಗ್ಗೆ ಅಲಿಖಾನ್ ಆಕ್ಷೇಪ ವ್ಯಕ್ತಪಡಿಸಿದ್ದು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಯ್ತು.

ಹೀಗಾಗಿ ಅಲಿಖಾನ್ ಮಾತಿಗೆ ಅನ್ಸಾರಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ಮುಂದೆಯೇ ಒಂದೇ ಸಮುದಾಯದ ಎರಡು ಬಣಗಳ ನಾಯಕರು ಕಚ್ಚಾಡಿಕೊಂಡರು. ಮಾತಿನ ಚಕಮಕಿ ಜೋರಾಗುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಪೊಲೀಸರು ಎರಡು ಬಣದ ನಾಯಕರನ್ನು ಸಮಾಧಾನ ಮಾಡಿದರು. ನಾವು ನೀಡುವ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಶಾಂತಿಗೆ ಭಂಗವನ್ನು ಯಾರು ತರಬಾರದು. ಕಾನೂನು ಸುವ್ಯವಸ್ಥೆ ಹಾಳು ಮಾಡೋರ ವಿರುದ್ಧ ಕಠೀಣ ಕ್ರಮ ಕೈಗೊಳ್ಳೋದಾಗಿ ಪೊಲೀಸರು ಎರಡು ಬಣದ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow us on