ಬಾಲ್ಯದಲ್ಲೇ ಮಕ್ಕಳಿಗೆ ಕಾಂಗ್ರೆಸ್ ವಿಚಾರಧಾರೆ ಮನದಟ್ಟಾಗಲು ಜವಾಹರ್ ಬಾಲ ಮಂಚ್ ಸ್ಥಾಪನೆ: ಶಿವಕುಮಾರ್

ಬಾಲ್ಯದಲ್ಲೇ ಮಕ್ಕಳಿಗೆ ಕಾಂಗ್ರೆಸ್ ವಿಚಾರಧಾರೆ ಮನದಟ್ಟಾಗಲು ಜವಾಹರ್ ಬಾಲ ಮಂಚ್ ಸ್ಥಾಪನೆ: ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Nov 14, 2024 | 2:08 PM

ಪಂಡಿತ್ ಜವಾಹರ್​ಲಾಲ್ ನೆಹರೂ ಭಾರತದ ಅಭಿವೃದ್ಧಿಗೆ ಯಾವ ರೀತಿಯ ಅಡಿಪಾಯ ಹಾಕಿದರೆನ್ನುವುದಕ್ಕೆ ಬೆಂಗಳೂರು ಮತ್ತು ಕರ್ನಾಟಕವೇ ಸಾಕ್ಷಿ, ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗುತ್ತಿದೆ ಅನ್ನೋದನ್ನು ಮನಗಂಡಿದ್ದ ಅವರು ಟಾಟಾ ಇನ್ಸ್ಟಿಟ್ಯೂಟ್, ಹೆಚ್​ಎಎಲ್ ಸೇರಿದಂತೆ ಹಲವಾರು ಸಂಸ್ಥೆಗಳನ್ನು ಇಲ್ಲಿ ಸ್ಥಾಪಿಸಿದರು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ಮಕ್ಕಳ ದಿನಾಚರಣೆಯ ಅಂಗವಾಗಿ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ವೇದಿಕೆಯ ಮೇಲೆ ಮಕ್ಕಳನ್ನು ಕೂರಿಸಿಕೊಂಡು ಮಾತಾಡಿದ ಡಿಕೆ ಶಿವಕುಮಾರ್, ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಕಾಂಗ್ರೆಸ್ ಪಕ್ಷದ ಆಚಾರ-ವಿಚಾರ, ತತ್ವ-ಸಿದ್ಧಾಂತ, ಜಾತ್ಯಾತೀತ ಧೋರಣೆ, ಭಾರತದ ಇತಿಹಾಸ ಮೊದಲಾದ ಸಂಗತಿಗಳು ಮನದಟ್ಟಾಗುವಂತೆ ಮಾಡಲು ರಾಹುಲ್ ಗಾಂಧಿಯವರು ಜವಾಹರ್ ಬಾಲ ಮಂಚ್ ಅಂತ ಹೊಸ ವಿಭಾಗವನ್ನು ಆರಂಭಿಸಿದ್ದಾರೆ, ಎಲ್ಲ ಶಾಸಕರು, ಸಂಸದರು ಮತ್ತು ಮುಖಂಡರು ಹೊಸ ಮಂಚ್ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಕೌಂಟರ್: ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದ ಬೆಂಬಲಿಗರು

Published on: Nov 14, 2024 02:03 PM