Karnataka Budget 2023: ಸದನದಲ್ಲಿಂದು ಅಪರಿಚಿತ ವ್ಯಕ್ತಿಯೊಬ್ಬ 15 ನಿಮಿಷ ಕೂತಿದ್ದರು ಎಂದು ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ ಆರೋಪ
ಜನಪ್ರತಿನಿಧಿಗಳಿಗಾಗಿ ಮೀಸಲಾಗಿರುವ ಸದನದಲ್ಲಿ ಅಗುಂತಕನೊಬ್ಬ ಬಂದು ಕೂರುತ್ತಾನೆಂದರೆ ಅದು ಗಂಭೀರ ಸ್ವರೂಪದ ಭದ್ರತಾ ಲೋಪ ಎಂದು ಶರಣಗೌಡ ಕಂದ್ಕೂರ್ ಹೇಳುತ್ತಾರೆ.
ಬೆಂಗಳೂರು: ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಮುಂಗಡ ಪತ್ರ 2023 (Karnataka Budget 2023) ಮಂಡಿಸಿದ ಬಳಿಕ ಹೊರಗಡೆ ಬಂದ ಗುರುಮಠಕಲ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದ್ಕೂರ್ (Sharangouda Kandkur) ಒಂದು ಗಂಭೀರವಾದ ಸಂಗತಿಯನ್ನು ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ತಂದರು. ಇಂದು ಆಧಿವೇಶನದಲ್ಲಿ ಬಜೆಟ್ ಮಂಡನೆಯಾಗುತ್ತಿದ್ದಾಗ ಒಬ್ಬ ಅಪರಿಚಿತ (Stranger) ವ್ಯಕ್ತಿ ಸದನದೊಳಗೆ ಬಂದು ಸುಮಾರು 15 ನಿಮಿಷಗಳ ಕಾಲ ಕೂತಿದ್ದನಂತೆ. ಅವರು ಯಾರು ಎಂದು ತಮ್ಮ ಸುತ್ತಮುತ್ತ ಕುಳಿತಿದ್ದ ಶಾಸಕರನ್ನು ಕೇಳಿದಾಗ ಅವರೆಲ್ಲ ಗೊತ್ತಿಲ್ಲ, ಪರಿಚಯವಿಲ್ಲ, ಮೊದಲ ಸಾರಿ ನೋಡುತ್ತಿರೋದು ಅಂತೆಲ್ಲ ಹೇಳಿದರಂತೆ. ಆ ಅಪರಚಿತ ವ್ಯಕ್ತಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ವಿಶ್ ಮಾಡಿ ಕೈಕುಲುಕಿದರು ಎಂದು ಶರಣಗೌಡ ಹೇಳಿದರು. ವಿಷಯವನ್ನು ಸಭಾಪತಿ ಯುಟಿ ಖಾದರ್ ಅವರ ಗಮನಕ್ಕೂ ಶಾಸಕ ತಂದಿದ್ದಾರೆ. ಜನಪ್ರತಿನಿಧಿಗಳಿಗಾಗಿ ಮೀಸಲಾಗಿರುವ ಸದನದಲ್ಲಿ ಅಗುಂತಕನೊಬ್ಬ ಬಂದು ಕೂರುತ್ತಾನೆಂದರೆ ಅದು ಗಂಭೀರ ಸ್ವರೂಪದ ಭದ್ರತಾ ಲೋಪ ಎಂದು ಶರಣಗೌಡ ಕಂದ್ಕೂರ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ