ಜೇವರ್ಗಿ ತಹಸೀಲ್ದಾರರಿಗೆ ತಮ್ಮ ಕಚೇರಿಯಲ್ಲೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಉಮೇದಿ! ನೆಟ್ಟಿಗರದ್ದು ಉಗಿಯುವ ಸರದಿ!!

ಹುಟ್ಟುಹಬ್ಬ ಆಚರಿಸಿಕೊಳ್ಳುವುದು ತಪ್ಪಲ್ಲ. ಅದ್ದೂರಿಯಾಗಿ ಆಚರಿಸಿಕೊಳ್ಳಲಿ ಮತ್ತು ಇಡೀ ಜೇವರ್ಗಿ ಜನರನ್ನು ಮನೆಗೆ ಕರೆದು ಕೇಕ್ ಕತ್ತರಿಸಲಿ ಮತ್ತು ಮೃಷ್ಟಾನ್ನ ಭೋಜನ ಬಡಿಸಲಿ, ಯಾರೂ ಬೇಡವೆನ್ನಲಾರರು. ಅಥವಾ, ಕಚೇರಿಯ ಸಿಬ್ಬಂದಿಯನ್ನು ಧಾಬಾಗೆ ಕರೆದೊಯ್ದು ಊಟ ಹಾಕಿಸಲಿ. ಅದೂ ಕೂಡ ತಪ್ಪಲ್ಲ.

TV9kannada Web Team

| Edited By: Arun Belly

Jan 18, 2022 | 10:31 PM

ಸರ್ಕಾರೀ ಕಚೇರಿಗಳು (government offices) ಸರ್ಕಾರಿ ಮತ್ತು ಸಾರ್ವಜನಿಕರ ಸೇವೆಯಲ್ಲದೆ ವೈಯಕ್ತಿಕ ಕಾರಣಗಳಿಗೂ ಉಪಯೋಗಿಸಬಹುದೆಂದು ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿಯಲ್ಲಿ (Jewargi) ತಹಸೀಲ್ದಾರ್ ಆಗಿ ಕೆಲಸ ಮಾಡುತ್ತಿರುವ ವಿನಯ ಪಾಟೀಲ ತೋರಿಸಿಕೊಟ್ಟಿದ್ದಾರೆ. ವಿನಯವಂತ ಮಹಾನುಭಾವರು ತಹಸೀಲ್ದಾರ್ ಕಚೇರಿಯ ತಮ್ಮ ಚೇಂಬರ್ನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸರ್ಕಾರೀ ಕಚೇರಿಗಳಲ್ಲಿ ಹುಟ್ಟುಹಬ್ಬ ಆಚರಿಸುವ ಪ್ರಕ್ರಿಯೆ ಯಾವಾಗಿನಿಂದ ಆರಂಭವಾಯಿತು ಅಂತ ವಿನಯ ಮತ್ತು ಅವರ ಸಿಬ್ಬಂದಿಯೇ ಜನರಿಗೆ ವಿವರಿಸಬೇಕು. ಕರ್ನಾಟಕದೆಲ್ಲೆಡೆ ಕೋವಿಡ್ ಸೋಂಕಿನ ಪ್ರಕರಣಗಳು ಒಂದೇ ಸಮನೆ ಹೆಚ್ಚುತ್ತಿವೆ. ಆದರೆ, ತಹಸೀಲ್ದಾರ್ ಅವರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ನೆಟ್ಟಿಗರು ಉಗಿಯುತ್ತಿದ್ದಾರೆ.

ಹುಟ್ಟುಹಬ್ಬ ಆಚರಿಸಿಕೊಳ್ಳುವುದು ತಪ್ಪಲ್ಲ. ಅದ್ದೂರಿಯಾಗಿ ಆಚರಿಸಿಕೊಳ್ಳಲಿ ಮತ್ತು ಇಡೀ ಜೇವರ್ಗಿ ಜನರನ್ನು ಮನೆಗೆ ಕರೆದು ಕೇಕ್ ಕತ್ತರಿಸಲಿ ಮತ್ತು ಮೃಷ್ಟಾನ್ನ ಭೋಜನ ಬಡಿಸಲಿ, ಯಾರೂ ಬೇಡವೆನ್ನಲಾರರು. ಅಥವಾ, ಕಚೇರಿಯ ಸಿಬ್ಬಂದಿಯನ್ನು ಧಾಬಾಗೆ ಕರೆದೊಯ್ದು ಊಟ ಹಾಕಿಸಲಿ. ಅದೂ ಕೂಡ ತಪ್ಪಲ್ಲ. ಆದರೆ, ತಹಸೀಲ್ದಾರ್ ಸಾಹೇಬರೇ, ತಾವು ಕೇಕ್ ಕತ್ತರಿಸುತ್ತಿರುವುದು ಸರ್ಕಾರಿ ಕಚೇರಿಯಲ್ಲಿ. ಚೇಂಬರ್ ನೀವು ಕುಳಿತುಕೊಳ್ಳುವ ಜಾಗವಾಗಿರಬಹುದು, ಆದರೆ ಅದು ನಿಮ್ಮ ಖಾಸಗಿ ಸೊತ್ತಲ್ಲ.

ನಿಮ್ಮ ಭಾಗದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಿಲ್ಲವೇ ತಹಸೀಲ್ದಾರರೇ? ಕುಟುಂಬವೊಂದರಲ್ಲಿ ಒಬ್ಬ ಸದಸ್ಯನಿಗೆ ಸೋಂಕು ತಾಕಿದರೆ ಅದು ಅನುಭವಿಸುವ ಯಾತನೆ, ಸಂಕಟಗಳನ್ನು ಗಮನಕ್ಕೆ ತಂದುಕೊಂಡು ನೋಡಿ.

ಆ ಕುಟುಂಬ ನೀವು ಕೇಕ್ ಕತ್ತರಿಸುತ್ತಿರುವ ವಿಡಿಯೋ ಕ್ಲಿಪ್ಪಿಂಗ್ ನೋಡಿದರೆ ಹೇಸಿಗೆಪಟ್ಟುಕೊಳ್ಳಲಾರರೇ? ಚೆನ್ನಾಗಿ ಓದಿಕೊಂಡವರು ನೀವು, ಕೊಂಚ ವಿವೇಚನೆ ಇರಲಿ.

ಇದನ್ನೂ ಓದಿ:   ಬಾಲಕಿಯ ಕಾಲು ಮುಟ್ಟಿ ನೃತ್ಯಾಭ್ಯಾಸ ಮಾಡಿಸಿದ್ದ ಬಿರ್ಜೂ ಮಹಾರಾಜ್​: ಸರಳ ವ್ಯಕ್ತಿತ್ವದ ಕಥಕ್​ ನೃತ್ಯ ಪಟುವಿನ ವಿಡಿಯೋ ವೈರಲ್​

Follow us on

Click on your DTH Provider to Add TV9 Kannada