Loading video

ಕಲಬುರಗಿ: ಜೆಸ್ಕಾಂ ಕಚೇರಿಗೆ ಮೊಸಳೆ ತಂದು ರೈತರ ಅಕ್ರೋಶ!

| Updated By: Ganapathi Sharma

Updated on: Feb 21, 2025 | 9:41 AM

ಜೆಸ್ಕಾಂ ಆ ಭಾಗದ ರೈತರಿಗೆ ಬೆಳಗಿನ ಜಾವ 4 ಗಂಟಗೆ ತ್ರೀ ಫೇಸ್ ಕರೆಂಟ್ ನೀಡುತ್ತಿದೆ. ಹೀಗಾಗಿ ಜಮೀನುಗಳಿಗೆ ನೀರು ಬಿಡಲು ಹೋದಾಗ ನದಿ ಪಾತ್ರದ ರೈತರಿಗೆ ಮೊಸಳೆಗಳ ಕಾಟ ಶುರುವಾಗಿದ್ದು, ಜಮೀನಿಗೆ ನೀರು ಬಿಡಲು ಬಂದ ರೈತನ ಮೇಲೆ‌ ಮೊಸಳೆ ದಾಳಿಗೆ‌ ಮುಂದಾಗಿತ್ತು. ಅದೃಷ್ಟವಶಾತ್ ರೈತ ಪರಾಗಿದ್ದು, ರೊಚ್ಚಿಗೆದ್ದ ರೈತರು ಜಮೀನಿಗೆ ನುಗ್ಗಿದ್ದ ಮೊಸಳೆಯನ್ನೆ ಹಿಡಿದು ಜೆಸ್ಕಾಂ ಕಚೇರಿಗೆ ತಂದು ಆಕ್ರೋಶ ಹೊರಹಾಕಿದ್ರು.

ಕಲಬುರಗಿ, ಫೆಬ್ರವರಿ 21: ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗರೂರ್ ಬಿ ಗ್ರಾಮದದಲ್ಲಿ ಮೊಸಳೆ ಕಾಟದಿಂದ ಬೇಸತ್ತ ಜನ ಮೊಸಳೆಯನ್ನು ಸೆರೆಹಿಡಿದುಕೊಂಡು ಬಂದು ಜೆಸ್ಕಾಂ ಕಚೇರಿಗೆ ತಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದಹಾಗೆ, ಮೊಸಳೆ ಕಾಟಕ್ಕೂ ಜೆಸ್ಕಾಂ ಕಚೇರಿಗೂ ಏನು ಸಂಬಂಧ ಅಂದುಕೊಂಡಿರಾ? ಈ ಗರೂರ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಭೀಮಾ ನದಿ ಪಾತ್ರದ ಜಮೀನುಗಳಿಗೆ ನಸುಕಿನ ಜಾವ 4 ಗಂಟೆ ಸುಮಾರಿಗೆ ಮಾತ್ರ ಜೆಸ್ಕಾಂ ತ್ರೀ ಫೇಸ್ ಕರೇಂಟ್ ಸಪ್ಲೈ ಮಾಡುತ್ತಿದೆ. ಇದರಿಂದಾಗಿ ಅವರು ಕೃಷಿ ಜಮೀನಿಗೆ ನೀರು ಹರಿಸಲು ಮೋಟಾರು ಆನ್ ಮಾಡಲು ಅಷ್ಟು ಹೊತ್ತಿಗೇ ಹೋಗಬೇಕು. ಆ ವೇಳೆ, ಅವರ ಮೇಲೆ ಮೊಸಳೆಗಳು ದಾಳಿ ನಡೆಸುತ್ತಿವೆ. ಇದರಿಂದ ಸಿಟ್ಟಾದ ಅವರು ಮೊಸಳೆ ಸೆರೆ ಹಿಡಿದು ಜೆಸ್ಕಾಂ ಕಚೇರಿಗೇ ಕೊಂಡೊಯ್ದಿದ್ದಾರೆ!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ